ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಹಕ್ಕು ಪತ್ರ ಹಗರಣದಲ್ಲಿ ಭಾಗಿಯಾಗಿದ್ದ ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಹಕ್ಕು ಪತ್ರಗಳ ವಿಚಾರದಲ್ಲಿ ನಿಯಮ ಉಲ್ಲಂಘನೆ ಮಾಡಿ ಮಂಜೂರಾತಿ ಮಾಡಿರುವ ಕಾರಣ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.
ಶೃಂಗೇರಿ ತಾಲೂಕಿನ ಕೆ.ಆರ್. ಸತೀಶ್ (ಗ್ರಾಮ ಲೆಕ್ಕಿಗ, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ, ಶೃಂಗೇರಿ) ವಿ. ಶಿವಕುಮಾರ್ (ಗ್ರಾಮ ಲೆಕ್ಕಿಗ, ಕಾವಡಿ ವೃತ್ತ. ಶೃಂಗೇರಿ ತಾಲೂಕು), ಎಂ. ಆರ್. ಸಂದೀಪ್, ರಾಜಸ್ವ ನಿರೀಕ್ಷಕ, ಕಸಬಾ ಹೋಬಳಿ, ಶೃಂಗೇರಿ ಈ ಮೂವರು ಅಧಿಕಾರಿಗಳು ಮನೆ ನಿವೇಶನ ಹಕ್ಕು ಪತ್ರ ನೀಡುವಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಧೃಡಪಟ್ಟ ಕಾರಣ ಸರ್ಕಾರಿ ಸೇವೆಯಿಂದ ಈ ಮೂವರು ನೌಕರರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ತನಿಖೆ ವೇಳೆ ಒಂದೇ ಕುಟುಂಬದ ಹಲವರಿಗೆ ಹಾಗೂ ಖಾಲಿ ಜಾಗಕ್ಕೆ ಹಕ್ಕುಪತ್ರ ನೀಡಿರುವುದು ಬಯಲು :
ತಹಶೀಲ್ದಾರ್ ಬಂಧನದ ನಂತರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪವಿಭಾಗಾಧಿಕಾರಿಗಳು ಖುದ್ದಾಗಿ ಶೃಂಗೇರಿ ತಾಲೂಕು ಕಛೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಜಾಗಕ್ಕೆ ದಾಖಲಾತಿ ಮಾಡಿಕೊಟ್ಟಿರುವುದು, ಒಂದೇ ಕುಟುಂಬದಲ್ಲಿ ಹಲವರಿಗೆ ಹಕ್ಕುಪತ್ರ ನೀಡಿರುವುದು ಹಾಗೂ ಖಾಲಿ ಜಾಗಕ್ಕೆ ಹಕ್ಕುಪತ್ರ ನೀಡಿರುವುದು ಬಯಲಾಗಿರುತ್ತದೆ. ಈ ವರದಿಯ ಆಧಾರದ ಮೇಲೆ ಸಧ್ಯ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ.
ಇದನ್ನೂ ಓದಿ : ಭ್ರಷ್ಟ ರಾಜಕೀಯ ಪಕ್ಷಗಳ ವಿರುದ್ಧ ವ್ಯಾಪಕ ಟೀಕೆ; ಕೈದಿ ನಂ 94c ರಿಲೀಸ್?
ಸಧ್ಯ ಮೂವರೂ ಆರೋಪಿಗಳು ಎಸ್ಕೇಪ್ ?:
ಉಪವಿಭಾಗಾಧಿಕಾರಿಗಳ ತನಿಖೆ ವೇಳೆಯಲ್ಲಿ ಈ ಮೂವರೂ ಸಹ ಹಾಜರಾಗದೆ ಇದ್ದು, ಮೊಬೈಲ್ ಫೋನ್ ಅನ್ನು ಸಹ ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ. ತಹಸೀಲ್ದಾರ್ ಅಂಬುಜಾ ಹಾಗೂ ಸಿದ್ದಪ್ಪ ಬಂಧನವಾಗುತ್ತಿದ್ದಂತೆಯೇ ಈ ಮೂವರೂ ಎಸ್ಕೇಪ್ ಆಗಿದ್ದರು.

0 Comments