ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಖೈದಿಯೋರ್ವ ಪ್ರತಿಷ್ಠಿತ ಉದ್ಯಮಿಗೆ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸುತ್ತಿರುವ ಶಿವಮೊಗ್ಗದ ರೌಡಿಶೀಟರ್ ಬಚ್ಚನ್ ಜೈಲಿನಿಂದಲೇ ಉದ್ಯಮಿಗೆ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಈ ಸಂಬಂಧ ಜನವರಿ 23 ರಂದು ದೂರು ದಾಖಲಾಗಿತ್ತು ಈ ಸಂಬಂಧ ಇಂದು ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ ಸಿಇಎನ್ ಠಾಣೆ ಸಿಪಿಐ ಹಾಗೂ ತುಂಗಾನಗರ ಠಾಣೆ ಪ್ರಭಾರ ಸಿಪಿಐ ಕೆ.ಟಿ.ಗುರುರಾಜ್ ಅವರ ನೇತೃತ್ವದ ತಂಡವು ಬಂಧಿತ ಬಚ್ಚನ್ ಬಳಿಯಿದ್ದ ಮೊಬೈಲ್ ಫೋನನ್ನು ವಶಕ್ಕೆ ಪಡೆದಿದ್ದಾರೆ.
ದರೋಡೆ,ಬೆದರಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆ ರೌಡಿ ಶೀಟರ್ ಬಚ್ಚನ್ ನನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಆದರೆ ಜೈಲಿನಿಂದಲೇ ಈತ ಬೇರೆ ಉದ್ಯಮಿಗೆ ಬೆದರಿಕೆ ಹಾಕಿರುವುದು ಇದೀಗ ಎಲ್ಲೆಡೆ ಹೆಚ್ಚಿನ ಸದ್ದುಮಾಡಿದೆ.
ಇದನ್ನೂ ಓದಿ : ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ
ಘಟನಾ ಸಂಬಂಧ ಪೊಲೀಸರು ಆರೋಪಿಯ ಬಳಿಯಿದ್ದ ಮೊಬೈಲ್ ಪೋನ್ ಹಾಗೂ ಆತನನ್ನು ಪ್ರತ್ಯೇಕ ಸೆಲ್ ನಲ್ಲಿರಿಸಿ ಆತನ ಮೇಲೆ ಗಮನವಹಿಸುವಂತೆ ಆದೇಶಿಸಿದ್ದಾರೆ.

0 Comments