ಕೊಡಗು : (ನ್ಯೂಸ್ ಮಲ್ನಾಡ್ ವರದಿ ) ಇನ್ನೇನು ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಕರ್ನಾಟಕದ ರಮಣೀಯ ಪ್ರದೇಶವಾದ ಕೊಡಗಿನಲ್ಲಿ ನಡೆಯಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನ್ನು ನಿರ್ಮಾಣ ಮಾಡಲು ಎಲ್ಲಾ ತಯಾರಿಗಳು ಈಗಲೇ ನಡೆಯುತ್ತಿದೆ.
ಅತೀ ಹೆಚ್ಚು ಪ್ರವಾಸಿಗರಿಂದ ಕೂಡಿರುವ, ಹೆಸರು ವಾಸಿಯಾಗಿರುವ ಪ್ರವಾಸಿ ಸ್ಥಳ ಕೊಡಗಿನಲ್ಲಿ ಇನ್ನೇನು ಕೇವಲ ಮೂರು ವರ್ಷಗಳಲ್ಲಿ ಬೃಹತ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವ ಸಲುವಾಗಿ ಈಗಾಗಲೇ ಜಿಲ್ಲಾಡಳಿತ 12 ಎಕರೆ ಜಾಗ ಮಂಜೂರು ಮಾಡಿದೆ. ಮಡಿಕೇರಿಯ ಪಾಲೆಮಾಡು ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈ ಕ್ರೀಡಾಂಗಣಕ್ಕೆ ಅಡ್ಡವಾದ ಎಲ್ಲಾ ಅಡೆ ತಡೆಗಳನ್ನು ಕೊಡಗಿನ ಜಿಲ್ಲಾಧಿಕಾರಿಗಳು ಪರಿಹರಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಪ್ರಕೃತಿ ಸೌಂದರ್ಯವನ್ನು ಸವಿಯಲು ಆಗಮಿಸುತ್ತಿದ್ದ ಪ್ರವಾಸಿಗರು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಾಟಗಳನ್ನು ನೋಡಲು ಕೊಡಗಿಗೆ ಆಗಮಿಸುತ್ತಾರೆ.
ಒಟ್ಟಿನಲ್ಲಿ ಇನ್ನೇನು ಕೆಲವೇ ವರ್ಷಗಳಲ್ಲಿ ಅದ್ಬುತವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವೊಂದು ಕರ್ನಾಟಕದ ಪ್ರವಾಸಿ ಕ್ಷೇತ್ರ ಕೊಡಗಿನಲ್ಲಿ ತಲೆ ಎತ್ತಲಿದೆ. ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿ ಪ್ರವಾಸೋದ್ಯಮ ಇನ್ನಷ್ಟು ಹೆಚ್ಚಲಿದೆ ಹಾಗೂ ಅಭಿವೃದ್ಧಿ ಹೊಂದಲಿದೆ. ಈ ಕುರಿತಾಗಿ ಕೊಡಗಿನ ಯುವ ಜನತೆ ಈಗಲೇ ಖುಷಿಯನ್ನು ವ್ಯಕ್ತಪಡಿಸಿದೆ. ಇಷ್ಟು ವರ್ಷಗಳ ನಂತರ ದೊಡ್ಡ ಮಟ್ಟದ ಕ್ರೀಡಾಂಗಣ ನಿರ್ಮಾಣ ಆಗುತ್ತಿರುವುದು ಮುಂಬರುವ ದಿನಗಳಲ್ಲಿ ಇನ್ನಷ್ಟು ಜನರುಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯನ್ನು ವೃದ್ಧಿಸಿಕೊಂಡು ಸಾಧನೆ ಮಾಡಲು ಉಪಕಾರಿಯಾಗಿದೆ.

0 Comments