ಹಾಸನ : (ನ್ಯೂಸ್ ಮಲ್ನಾಡ್ ವರದಿ) ಯುವಕನೋರ್ವನಿಗೆ ಉದ್ಯೋಗ ನೀಡುವ ಆಸೆ ತೋರಿಸಿ 12 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಹಾಸನ ತಾಲೂಕಿನ ತಟ್ಟೇಕೆರೆ ಗ್ರಾಮದ ಬಿ.ಕಾಂ ಪದವೀಧರ ದಿನೇಶ್ ಎಂಬ ಯುವಕನಿಗೆ ದೇವಸ್ಥಾನದಲ್ಲಿ ಪರಿಚಯವಾದ ಭೀಮರಾಯ ಹಾಗೂ ಸುನೀಲ್ ಎಂಬ ಇಬ್ಬರು ಬೆಂಗಳೂರಿನ ವಿಧಾನಸೌಧದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಯುವಕನಿಂದ ಹಣ ಪಡೆದು ವಂಚನೆ ಮಾಡಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಓರ್ವ ವ್ಯಕ್ತಿಯ ಸಾವು
ಅಸಲಿಗೆ ಮೋಸ ಮಾಡಿದ ಇಬ್ಬರು ಕೂಡ ಯುವಕನಿಗೆ 2017 ರಿಂದಲೂ ಪರಿಚಯವಿದ್ದು ಅತ್ಯಂತ ಪರಿಚಯಸ್ಥರೇ ಹಣಕ್ಕಾಗಿ ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ. ದಿನಾಂಕ 11.03.2020 ರಂದು 12 ಲಕ್ಷ ಹಣ ಪಡೆದ ವಂಚಕರು ಯುವಕ ದಿನೇಶ್ ಗೆ ವಂಚಿಸಿದ್ದಾರೆ ಈ ಕುರಿತು ದಿನೇಶ್ ಅವರ ತಾಯಿ ಠಾಣೆಗೆ ತೆರಳಿ ಪ್ರಕರಣ ದಾಖಲು ಮಾಡಿರುತ್ತಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಹಾಸನ ನಗರ ಪೊಲೀಸರು ಆರೋಪಿಗಳ ಕುರಿತಾಗಿ ಮಾಹಿತಿ ಕಲೆ ಹಾಕುತ್ತಿದ್ದು ಮುಂಬರುವ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

0 Comments