ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋಮಾಂಸ ಸಾಗಾಟ ನಡೆಸುತ್ತಿದ್ದ ಅಸ್ಸಾಂ ಕಾರ್ಮಿಕನನ್ನು ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ

ಇದನ್ನೂ ಓದಿ : ಕಳಸ : ಅಗ್ನಿಅವಘಡ ಹೊತ್ತಿಉರಿದ ಒಂದೂವರೆ ಎಕರೆ ಅರಣ್ಯಪ್ರದೇಶ

ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ನಡೆಸುತ್ತಿದ್ದ ಅಸ್ಸಾಂ ಕಾರ್ಮಿಕನನ್ನು ಅನುಮಾನದ ಮೇರೆಗೆ ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ತಾನು ಹೊಂದಿದ್ದ ಚೀಲದಲ್ಲಿ ಗೋಮಾಂಸ ಇರುವುದಾಗಿ ಆತನೇ ಬಾಯ್ಬಿಟ್ಟಿದ್ದಾನೆ. ನಂತರ ಆತನ ವಿಳಾಸದ ಕುರಿತು ಕೇಳಿದಾಗ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರ ತೋಟದಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಾನೆ. ಆತನ ಬಳಿ ಪ್ಲಾಸ್ಟಿಕ್ ಚೀಲದಲ್ಲಿದ್ದ ಅಂದಾಜು 40 ಕೆ.ಜಿ ಗಳಷ್ಟು ಗೋಮಾಂಸ ವಶಕ್ಕೆ ಪಡೆಯಲಾಗಿದೆ. ಇದು ರಾಜಕೀಯ ಟೀಕೆಗೆ ಸಹ ಕಾರಣವಾಗಿದೆ.

ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಸ್ಥಳ ಮಹಜರು ಮಾಡಿ ಪ್ರಕರಣ ದಾಖಲಿಸಿದ್ದಾರೆ.