ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಜನರ ಮನೋರಂಜನೆಗೆ, ಚಿತ್ರಗಳ ವೀಕ್ಷಣೆಗೆ ಇರುವ ಕೊಪ್ಪದ ಜೆಎಂಜೆ ಥಿಯೇಟರ್ ಗೆ ಇದೀಗ 48 ನೆಯ ವಸಂತ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಕೊಪ್ಪ ಜೆಎಂಜೆ ಟಾಕೀಸ್ ಮಲೆನಾಡಿಗರ ಮನೋರಂಜನೆಗೆ ಪ್ರಮುಖವಾದ ಸ್ಥಳವಾಗಿದೆ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಬಾಳೆಹೊನ್ನೂರು, ಹರಿಹರಪುರ, ಜಯಪುರ, ಕೆರೆಕಟ್ಟೆ, ಮುಂತಾದ ಭಾಗಗಳ ಜನರು ಚಲನಚಿತ್ರ ವೀಕ್ಷಣೆಗೆ ಇದೇ ಕೊಪ್ಪದ ಹೆಸರಾಂತ ಚಿತ್ರ ಮಂದಿರವಾಗಿರುವ ಜೆಎಂಜೆ ಟಾಕೀಸ್ ಗೆ ಆಗಮಿಸಿ ಚಲನಚಿತ್ರಗಳನ್ನು ಆನಂದಿಸುತ್ತಾರೆ.

ಇದನ್ನೂ ಓದಿ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ ; ಆರೋಪಿಯನ್ನು ಬಂಧಿಸಿದ ಪೊಲೀಸರು

ಕೊರೋನ ಮಹಾಮಾರಿಯು ದೇಶವನ್ನು ವ್ಯಾಪಿಸಿದ್ದ ಮೊದಲನೇ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸರ್ಕಾರ ವಿಧಿಸಿದ್ದ ಲಾಕ್ ಡೌನ್ ಗೆ ಸಮಾಜದ ಅನೇಕ ಕ್ಷೇತ್ರಗಳ ಜನರು ಸಂಕಷ್ಟಕ್ಕೀಡಾಗಿದ್ದರು ಅಂತೆಯೇ ಇಲ್ಲಿನ ಚಲನಚಿತ್ರ ಮಂದಿರದ ನಿರ್ವಹಣೆಯು ಕೂಡ ಅತ್ಯಂತ ಕ್ಲಿಷ್ಟಕರವಾಗಿತ್ತು ನಂತರದ ದಿನಗಳಲ್ಲೂ ಕೂಡ ಸರ್ಕಾರ ವಿಧಿಸಿದ್ದ 50 - 50 ನಿಯಮಗಳು ಕೂಡ ಹೆಚ್ಚಿನ ಪರಿಣಾಮವನ್ನು ಈ ಚಲನಚಿತ್ರ ಮಂದಿರಗಳ ಮೇಲೆ ಬೀರಿತ್ತು ಪ್ರಸ್ತುತ ಯಾವುದೇ ನಿರ್ಬಂಧಗಳು ಇಲ್ಲದೇ ಇರುವುದರಿಂದ ಸಂಸ್ಥೆಯು ಪ್ರಸ್ತುತ ನಿಟ್ಟುಸಿರು ಬಿಡುವಂತಾಗಿದೆ.

ಹಳೆಯ ದಿನಗಳಿಂದ ಈಗಿನ ವರೆಗೆ ಅನೇಕ ಕಷ್ಟ ನಷ್ಟಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಈ ಚಿತ್ರ ಮಂದಿರದ ಹೆಗ್ಗಳಿಕೆಯೇ ಸರಿ. ಅನೇಕ ಸವಾಲುಗಳನ್ನು ಎದುರಿಸಿ ಇಂದು 48 ನೆಯ ವಸಂತಕ್ಕೆ ಕಾಲಿಟ್ಟಿರುವ ಜೆಎಂಜೆ ಚಿತ್ರಮಂದಿರದ ಇಡೀ ನಿರ್ವಹಣಾ ತಂಡಕ್ಕೆ ಚಿತ್ರಾಭಿಮಾನಿಗಳು ಹಾಗೂ ಸಿನಿಪ್ರಿಯರು ಅಭಿನಂದಿಸಿದ್ದಾರೆ. ಇನ್ನೂ ಹೆಚ್ಚಿನ ಸಾಧನೆಗಳನ್ನು ಹಾಗೂ ಪ್ರಶಂಸೆ ಪಡೆಯುವಂತಾಗಲಿ ಎಂದು ಜನ ತುಂಬು ಹೃದಯದಿಂದ ಹಾರೈಸಿದ್ದಾರೆ.