ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕಿನ ಭೂತನಕಾಡು ಗ್ರಾಮದ ಅಂಗಡಿಯೊಂದರಲ್ಲಿ ಅಡುಗೆ ಎಣ್ಣೆ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಭೂತನಕಾಡು ಗ್ರಾಮದ ದಿನಸಿ ಅಂಗಡಿಯಲ್ಲಿಟ್ಟಿದ ಸುಮಾರು 87 ಸಾವಿರ ಮೌಲ್ಯದ 50 ಬಾಕ್ಸ್ ಅಡಿಗೆ ಎಣ್ಣೆಯನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯಿಂದ 50 ಬಾಕ್ಸ್ ಎಣ್ಣೆಯನ್ನು ಹಾಗೂ ಒಂದು ಒಮಿನಿ ಕಾರನ್ನು ಪೊಲೀಸರು ವಶ ಪಡೆದಿದ್ದಾರೆ. ಈ ಕಾರ್ಯಾಚರಣೆಯನ್ನು ಆಲ್ದೂರುವೃತ್ತದ ಪೊಲೀಸರ ನೇತೃತ್ವದ ತಂಡ ಪತ್ತೆ ಮಾಡಿದೆ. ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿಗಳು ಆತನ ಸಂಪೂರ್ಣ ತನಿಖೆಯಿಂದ ತಿಳಿಯಬೇಕಿದೆ.

0 Comments