ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ. ಒಣಗಲೆಂದು ಅಡಿಕೆಯನ್ನು ಪಕ್ಕದ ಮನೆಯವರ ಜಾಗದಲ್ಲಿ ಹಾಕಿದಾಗ ಈ ಕಳ್ಳತನ ನಡೆದಿದ್ದು ಅಂದಾಜು 62 ಚೀಲ ಸಿಪ್ಪೆಗೋಟು ಅಡಿಕೆ ಕಳವಾಗಿದೆ ಎಂದು ತಿಳಿದುಬಂದಿದೆ. ರಾತ್ರಿಯ ವೇಳೆ ಹಾಕಿದ್ದ ಅಡಿಕೆ ಮರುದಿನ ಬೆಳಗಾಗುವಷ್ಟರಲ್ಲಿ ಕಳ್ಳತನವಾಗಿದೆ.
ಇದನ್ನೂ ಓದಿ : ಜಯಪುರ : ಸರಣಿ ಮನೆಕಳ್ಳತನ ನಡೆಸಿದ್ದ ಆರೋಪಿ ಬಂಧನ
ಈ ಕುರಿತಾಗಿ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣವು ಸಾಗರದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ ಹಾಗೂ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

0 Comments