ಕಳಸ : ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಮೂವರು ಬಾಲಕಿಯರ ಮೇಲೆ ಜೀಪ್ ಅಪಘಾತ ಉಂಟಾದ ಪರಿಣಾಮ ಓರ್ವ ಬಾಲಕಿ ಮರಣಹೊಂದಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು ಮಸೀದಿಯಿಂದ ತರಗತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕಿಯರಿಗೆ ಜೀಪ್ ಗುದ್ದಿದೆ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. ಕಳಸದಿಂದ ಕಳ್ಕೊಡು ಕಡೆಗೆ ತೆರಳುತ್ತಿದ್ದ ಜೀಪ್ ಅಚಾನಕ್ಕಾಗಿ ಮಕ್ಕಳಿಗೆ ಗುದ್ದಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. ಅಪಘಾತ ಉಂಟುಮಾಡಿದ ಚಾಲಕನೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ ನಂತರದಲ್ಲಿ ಜೀಪಿನ ಜೊತೆಗೆ ಕಳಸದ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಕುರಿತು ತಿಳಿಸಿ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಬಾಲಕಿಯನ್ನು ನಫೀಸಾ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಕಳಸದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪದ ವೈದ್ಯರ ಮೇಲೆ ಅಕ್ರೋಶಗೊಂಡ ಸಾರ್ವಜನಿಕರು :
ಸರ್ಕಾರಿ ವೈದ್ಯರು ಕಳಸದ ಆಸ್ಪತ್ರೆಯಲ್ಲಿ ಇದ್ದರೂ ಕೂಡ ರಾತ್ರಿ ಮರಣೊತ್ತರ ಪರೀಕ್ಷೆ ಮಾಡಲು ಒಪ್ಪದ ವೈದ್ಯರ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕುಟುಂಬಸ್ಥರು ಮತ್ತು ಸಾರ್ವಜನಿಕರು ವೈದ್ಯರ ಬಳಿ ಪರಿ ಪರಿಯಾಗಿ ವಿನಂತಿಸಿದರೂ ಒಪ್ಪಲಿಲ್ಲ. ಜಿಲ್ಲಾ ವೈದ್ಯರ ಮಾತಿಗೂ ಕಿಮ್ಮತ್ತು ಕೊಡದೆ ಇದ್ದ ನಂತರದಲ್ಲಿ ಬಾಳೆಹೊಳೆ ಅಸ್ಪತ್ರೆಯ ವೈದ್ಯರು ಬಂದು ಮರಣೋತ್ತರ ಪರಿಕ್ಷೆ ನಡೆಸಿದರು.
ತನು ಕೊಟ್ಟಿಗೆಹಾರ, ವರದಿಗಾರರು

0 Comments