ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದ ತಾವರೆ ಕೊಪ್ಪದ ಹುಲಿ ಸಿಂಹ ಧಾಮದ ಸಿಂಹಿಣಿ ಸಾವನ್ನಪ್ಪಿದೆ.
ಶಿವಮೊಗ್ಗದ ತಾವರೆಕೊಪ್ಪ ಹುಲಿ ಸಿಂಹಧಾಮದ ಸಿಂಹಿಣಿ ಮಾನ್ಯ ಕೆಲ ದಿನಗಳ ಹಿಂದೆ ಯಶವಂತ್ ಎಂಬ ಸಿಂಹದ ಜೊತೆ ಕಾದಾಟ ನಡೆಸಿ ಬಹಳ ಗಂಭೀರವಾಗಿ ಗಾಯಗೊಂಡಿತ್ತು. ಕಳೆದ ಒಂದು ವಾರದಿಂದ ವೈದ್ಯರು ನಿರಂತರವಾಗಿ ಸಿಂಹಿಣಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿದ್ದರು ಆದರೆ ಚಿಕಿತ್ಸೆ ಫಲಿಸದೆ ಹನ್ನೊಂದು ವರ್ಷದ ಸಿಂಹಿಣಿ ಮಾನ್ಯ ಸಾವನ್ನಪ್ಪಿದೆ.
ಇದನ್ನೂ ಓದಿ :ಅತ್ಯಾಚಾರದ ಆರೋಪದಡಿ ಜೈಲು ಸೇರಿದ್ದ ಮುಸ್ಲಿಂ ಯುವಕನೊಂದಿಗೆ ಶೃಂಗೇರಿಯ ಹಿಂದೂ ಯುವತಿ ಎಸ್ಕೇಪ್
ತಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಒಟ್ಟು ಆರು ಸಿಂಹಗಳು ಇದ್ದವು ಮಾನ್ಯನ ಸಾವಿನ ನಂತರ ಸಿಂಹಧಾಮದಲ್ಲಿ ಐದು ಸಿಂಹಗಳು ಉಳಿದಿವೆ.

0 Comments