ಕೊಪ್ಪ :(ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಪ್ರಶಮನೀ ಆಸ್ಪತ್ರೆ ವತಿಯಿಂದ ದಿನಾಂಕ 12 ಫೆಬ್ರವರಿ 2022 ರಂದು ಮಂಡಿ ನೋವು ಹಾಗೂ ಮಂಡಿ ಸವೆತ ಮುಂತಾದ ಸಮಸ್ಯೆಗಳಿಗೆ ಸಂದರ್ಶನ ಹಾಗೂ ಚಿಕಿತ್ಸಾ ಶಿಬಿರ ಆಯೋಜನೆಗೊಂಡಿದೆ.

ಕೊಪ್ಪದ ಪ್ರತಿಷ್ಠಿತ ಪ್ರಶಮನೀ ಆಸ್ಪತ್ರೆಯು ಸಾರ್ವಜನಿಕರ ಹಾಗೂ ರೋಗಿಗಳ ಅನುಕೂಲಕ್ಕಾಗಿ ಮಂಡಿನೋವು ಹಾಗೂ ಮಂಡಿ ಸವೆತದ ರೋಗಿಗಳಿಗೆ, ವ್ಯಾಯಾಮ ಹಾಗೂ ಆಟವಾಡುವಾಗ ಸಮಸ್ಯೆಗೊಳಗಾದ ವ್ಯಕ್ತಿಗಳು ಭುಜ ಹಾಗೂ ಕೀಲು ನೋವುಗಳಿಗೆ ಸಂಬಂಧ ಪಟ್ಟ ವ್ಯಕ್ತಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. 

ಚಿಕಿತ್ಸೆ ಪಡೆಯಲು ಆಯುಷ್ಮಾನ್, ಸ್ಟಾರ್ ಹೆಲ್ತ್, ಮ್ಯಾಮ್ ಕೋಸ್, ಐ.ಸಿ.ಐ.ಸಿ ಲಂಬಾರ್ಡ್ ಮೆಡಿ ಅಸಿಸ್ಟ್, ಎಂಡಿ ಇಂಡಿಯಾ, ಇ.ಎಸ್.ಐ.ಸಿ ಹಾಗೂ ಇನ್ನಿತರ ಹೆಲ್ತ್ ಕಾರ್ಡ್ಗಳು ಲಭ್ಯವಿದೆ.

ಮಂಗಳೂರಿನ ಹೆಸರಾಂತ ಆರ್ಥೋಸ್ಕೋಪಿಕ್ ಸರ್ಜನ್, ಮಂಡಿ ಮರು ಜೋಡಣಾ ತಜ್ಞ ಡಾ ಶರತ್ ಬಾಳೆಮನೆ ಇವರು ಲಭ್ಯವಿದ್ದು ಸಂದರ್ಶನ ಸಲಹೆ ಹಾಗೂ ಚಿಕಿತ್ಸೆಗೆ ಲಭ್ಯವಿರುತ್ತಾರೆ. ಅರ್ಹರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆ ವತಿಯಿಂದ ತಿಳಿಸಿದ್ದಾರೆ.

ಶಿಬಿರ ನಡೆಯುವ ಸ್ಥಳ :

ಪ್ರಶಮನೀ ಆಸ್ಪತ್ರೆ

ಬಾಳಗಡಿ ರಸ್ತೆ, ಕೊಪ್ಪ - 577126

ನೋಂದಣಿಗಾಗಿ ಸಂಪರ್ಕಿಸಿ 

ಡಾ.ರೇಷ್ಮಾ ಸಂಪರ್ಕಾಧಿಕಾರಿ ದೂರವಾಣಿ ಸಂಖ್ಯೆ : 9900413005 

ಇದನ್ನೂ ಓದಿ :ಪ್ರತಿಭಟನಾ ಸಂದರ್ಭದಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಯ ಮೇಲೆ ಹಲ್ಲೆ ; ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ