ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲದಿನಗಳಿಂದ ಗಾಯಗೊಂಡು ಅತೀವ ನೋವಿನಿಂದ ಬಳಲುತ್ತಿದ್ದ ಎತ್ತಿನಗುಡ್ಡಕ್ಕೆ ಸ್ಥಳೀಯರೇ ಇಂದು ಔಷಧೋಪಚಾರ ನೀಡಿ ಆರೈಕೆ ಮಾಡಿದ್ದಾರೆ.
ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಓರ್ವ ವ್ಯಕ್ತಿಯ ಸಾವು
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣಕ್ಕೆ ಹೊಂದಿಕೊಂಡಿರುವ ಹನುಮಂತನಗರದಲ್ಲಿ ಎತ್ತಿನಗುಡ್ಡವೊಂದಕ್ಕೆ ಯಾರೋ ದುಷ್ಕರ್ಮಿಗಳು ತಂತಿಯಿಂದ ಉರುಳು ಹಾಕಿ ಘಾಸಿಗೊಳಿಸಿದ್ದರು, ಹದಿನೈದು ದಿನಗಳಿಂದ ಅತ್ಯಂತ ನೋವಿನಿಂದ ಬಳಲಿದ್ದ ಎತ್ತಿನ ಗುಡ್ಡಕ್ಕೆ ಇಂದು ಹನುಮಂತನಗರದ ನಿವಾಸಿ ಸಲೀಂ ಅವರು ಸ್ಥಳೀಯರೊಂದಿಗೆ ಸೇರಿಕೊಂಡು ಕಾಲಿಗೆ ಸಿಕ್ಕಿಹಾಕಿಕೊಂಡಿದ್ದ ತಂತಿಯನ್ನು ತೆಗೆದು ವೈದ್ಯರ ನೆರವನ್ನು ಪಡೆದು ಗಾಯವನ್ನು ಶುಚಿಗೊಳಿಸಿ ಔಷಧಿನೀಡಿ ಆರೈಕೆ ಮಾಡಿದ್ದಾರೆ.
ಇಡೀ ತಂಡವು ನಡೆಸಿದ ಈ ಉತ್ತಮ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಮೂಕಜೀವಿಗಳನ್ನು ಅತ್ಯಂತ ಮಮತೆಯಿಂದ ನೋಡಿಕೊಳ್ಳಬೇಕು ಅವುಗಳ ಆರೈಕೆ ಅತ್ಯಗತ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಲೀಂ, ನಾಗೇಶ, ಸುಕೇಶ, ಚಂದ್ರಪ್ಪ, ಶೃಂಗೇಶ್ವರ, ಶ್ರೀನಿವಾಸ, ಸುಬ್ರಮಣ್ಯ, ಶಂಕರ, ಅಶೋಕ ಹಾಗೂ ವೆಂಕಟರಾಮ್ ಇದ್ದರು

0 Comments