ಶೃಂಗೇರಿ :(ನ್ಯೂಸ್ ಮಲ್ನಾಡ್ ವರದಿ) ಕಡತ ಕಳ್ಳತನದ ಆರೋಪಿ ಕೇಸ್ ವರ್ಕರ್ ಪ್ರಕಾಶ್ ಗೆ ಶೃಂಗೇರಿ ಶಾಸಕರಾದ ಟಿ.ಡಿ ರಾಜೇಗೌಡರ ರಕ್ಷಣೆ ಇದೆ ಎಂದು ಬಿಜೆಪಿ ನಾಯಕರು ಕೊಪ್ಪದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪ ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್ 400ಕ್ಕೂ ಅಧಿಕ ಕಡತಗಳ ಕಳ್ಳತನದ ಆರೋಪದಲ್ಲಿ ಸಿಲುಕಿದ್ದಾನೆ. ಆತನಿಂದ ರೈತರಿಗೆ ಅನ್ಯಾಯವಾಗಿದೆ ಆದರೂ ಶಾಸಕರ ಆದೇಶದ ಮೇರೆಗೆ ಶೃಂಗೇರಿ ತಾಲೂಕು ಕಛೇರಿಗೆ ವರ್ಗಾವಣೆ ಮಾಡಲಾಗಿದೆ. ಅದಷ್ಟೇ ಅಲ್ಲದೇ ಶಾಸಕರ ಮೌಖಿಕ ಆದೇಶದಂತೆ ಶೃಂಗೇರಿ ತಹಸೀಲ್ದಾರ್ ಅವರು 94ಸಿ ವಿಭಾಗಕ್ಕೆ ನೇಮಕ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.ಇದಕ್ಕೆ ಪೂರಕವಾದ ದಾಖಲೆಗಳು ಸಹ ಇರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ ; ಇನ್ನೋರ್ವ ಮಹಿಳೆಯ ಸ್ಥಿತಿ ಗಂಭೀರ
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಶೆಟ್ಟಿಗದ್ದೆ ರಾಮಸ್ವಾಮಿ, ಸತೀಶ್ ಅದ್ದಡ, ದಿನೇಶ್ ಹೊಸೂರು ಇದ್ದರು

0 Comments