ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಮರ ಕಡಿಯುವ ವೇಳೆ ಆಯತಪ್ಪಿ ಮರದ ಕೊಂಬೆಗಳು ವ್ಯಕ್ತಿಯ ಮೇಲೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಇದನ್ನೂ ಓದಿ : ಹುಲಿ ಉಗುರು ಹಾಗೂ ಹುಲಿಯ ಇತರ ಭಾಗಗಳನ್ನು ಮಾರಾಟ ನಡೆಸಲು ಯತ್ನಿಸಿದ ಆರೋಪಿಗಳು ಸೆರೆ ಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಶಂಕೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಲಿಗನಾಡು ಗ್ರಾಮದ ತೋಟದಲ್ಲಿ ಮರ ಕಡಿಯುವಾಗ ಈ ಅವಘಡ ಸಂಭವಿಸಿದೆ. ಮರ ಕಡಿಯುತ್ತಿದ್ದ ವಿಜೇಂದ್ರ ಎಂಬ ವ್ಯಕ್ತಿಯ ತಲೆ ಮೇಲೆ ಮರದ ರೆಂಬೆಗಳು ಬಿದ್ದು ತಲೆಗೆ ತೀವ್ರವಾಗಿ ಗಾಯವಾಗಿತ್ತು, ಕೂಡಲೇ ಸ್ಥಳೀಯರ ನೆರವಿನಿಂದ ಅವರಿಗೆ ಮೂಡಿಗೆರೆ ತಾಲೂಕಿನ ಬಣಕಲ್ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕಕ್ಕಿಂಜೆ ಸಮೀಪ ಕೊನೆಯುಸಿರೆಳೆದಿದ್ದಾರೆ.

ಮೃತ ವ್ಯಕ್ತಿ ವಿಜೇಂದ್ರ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಎಷ್ಟೇ ಶೀಘ್ರವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ತನು ಕೊಟ್ಟಿಗೆಹಾರ, ವರದಿಗಾರರು