ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಕಾಡು ಹಂದಿಯನ್ನು ಭೇಟೆಯಾಡಿ ಮಾಂಸವನ್ನು ಸಾಗಾಟ ನಡೆಸುತ್ತಿದ್ದ ಐದು ಜನರನ್ನು ಅರಣ್ಯ ಸಂಚಾರಿದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ಬೈಕ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಬೈಕ್ ಸವಾರ ಆಸ್ಪತ್ರೆಗೆ ದಾಖಲು, ವಾಹನ ಜಖಂ
ಚಿಕ್ಕಮಗಳೂರಿನ ಲಕ್ಯಾ ಹೋಬಳಿಯ ಸಮೀಪ ಕಾರ್ ವೊಂದರಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸವನ್ನು ಸಾಗಾಟ ನಡೆಸುತ್ತಿದ್ದ ಐವರನ್ನು ಚಿಕ್ಕಮಗಳೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು ಕಾರ್ಯಾಚರಣೆಯ ಮೂಲಕ ಬಂಧಿಸಿದ್ದಾರೆ.
ಬಂಧಿತರ ಮೇಲೆ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಬಂಧನಕ್ಕೊಳಗಾದವರನ್ನು ಮಧುಕುಮಾರ್, ಜಯೇಶ್, ಈಶಪ್ಪ, ಕೃಷ್ಣ, ವಿಜಯಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 23 ಕೆಜಿ ಮಾಂಸ, ಪರವಾನಗಿ ಹೊಂದಿರುವ ಎರಡು ಬಂದೂಕು, ಕತ್ತಿ, ಹಾಗೂ ಕಾರನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆಯು ಆರಂಭಗೊಂಡಿದೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರು ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಯುತ, ಕೆ.ಆರ್.ಸತೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಸಿ.ಜಯೇಶ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಆರ್. ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ನಂದೀಶ್, ನಾರಾಯಣ್,ದಿನೇಶ್, ವೆಂಕಟೇಶ್, ಅಶ್ವಥ್, ಹಾಗೂ ಅರಣ್ಯ ರಕ್ಷಕರುಗಳಾದ, ಕುಮಾರಸ್ವಾಮಿ, ಹೇಮಂತ್, ಈಶ್ವರ್, ವೆಂಕಟೇಶ್, ಜಯ್ ಪ್ರಕಾಶ್, ಹಾಗೂ ವಾಹನ ಚಾಲಕ ಸುನೀಲ್ ಕುಮಾರ್, ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.

0 Comments