ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಧುರುಳ ಕಾಮುಕ ತಂದೆಯನ್ನು ಗ್ರಾಮಸ್ಥರು ಪೊಲೀಸರಿ ಗೊಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಗೋವಿಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಾಮುಕ ತಂದೆ ತನ್ನ ಮಗಳ ಮೇಲೆಯೇ ನಿರಂತರವಾಗಿ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾನೆ. ಕಾಮುಕ ತಂದೆಯನ್ನು ಮೂಲತಃ ಹಾವೇರಿಯ ಗೋಣಪ್ಪ ಎಂದು ಗುರುತಿಸಲಾಗಿದೆ. ಈತನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳು ಇದ್ದಾಳೆ ಶುಂಠಿ ಮಾರಾಟ ಮಾಡಿಕೊಂಡು ಜೀವನ ನಡೆಸುವ ಈತನು ನಿರಂತರವಾಗಿ ನಾಲ್ಕು ವರ್ಷಗಳಿಂದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ತಂದೆಯ ಈ ವರ್ತನೆಯನ್ನು ತಾಯಿಗೆ ವ್ಯಕ್ತಪಡಿಸದಮಗಳು ತಾನೇ ಈ ನೋವನ್ನು ಅನುಭವಿಸಿದ್ದಳು. ತಂದೆ ಬದಲಾಗುವುದಿಲ್ಲ ಎಂದರಿತ ಯುವತಿ ಕೊನೆಗೆ ತನ್ನ ತಾಯಿಯ ಬಳಿ ತಂದೆಯ ಈ ಕೃತ್ಯದ ಕುರಿತಾಗಿ ತಿಳಿಸಿದ್ದಾಳೆ. ಆದರೆ ತಾಯಿಯು ಕೂಡ ಅಬಲೆ ಆತನನ್ನು ತಡೆಯುವ ಅಥವಾ ಅವನ ವಿರುದ್ದವಾಗಿ ಮಾತನಾಡುವ ಯಾವುದೇ ಅವಕಾಶಗಳು ದೊರೆಯದ ಕಾರಣ ಕೊನೆಯದಾಗಿ ಮಗಳನ್ನು ಬಚಾವ್ ಮಾಡಲು ಉಪಾಯವೊಂದನ್ನು ಮಾಡುತ್ತಾಳೆ. ಇನ್ನೂ ಹದಿನೆಂಟು ವರ್ಷ ತುಂಬದ ಮಗಳಿಗೆ ಮದುವೆ ಮಾಡಿ ಆಕೆಯನ್ನು ಬಚಾವ್ ಮಾಡುವ ಕುರಿತು ಆಲೋಚಿಸುತ್ತಾಳೆ ಅಂತೆಯೇ ಎಂಗೇಜ್ಮೆಂಟ್ ಕೂಡ ಮಾಡುತ್ತಾಳೆ ಆದರೆ ಇದನ್ನರಿತ ಪಾಪೀ ತಂದೆಗೋಣಪ್ಪ ಮಗಳಿಗೆ ಬೆದರಿಕೆಯೊಡ್ಡಲು ಆರಂಭಿಸುತ್ತಾನೆ.ಮದುವೆಯಾದರೆ ನಿನ್ನನ್ನು ಬಿಡೋಲ್ಲ ಎಂದು ಮಗಳಿಗೆ ಆವಾಜ್ ಹಾಕುತ್ತಾನೆ ನಂತರದಲ್ಲಿ ಈತನಿಂದ ಬಚಾವ್ ಆಗಲು ಸಾಧ್ಯವಿಲ್ಲ ಎಂದರಿತ ತಾಯಿ ಮಕ್ಕಳ ಜೊತೆಗೆತವರು ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಾಳೆ.
ಇದನ್ನೂ ಓದಿ : ಜಯಪುರ : ಯಾರೂ ಇಲ್ಲದ ವೇಳೆ ಮನೆಗೆ ಕನ್ನ ಹಾಕಿದ ಕಳ್ಳರು
ತನ್ನ ಅಕ್ಕನಿಗೆ ಈ ಕುರಿತು ವಿಚಾರ ತಿಳಿಸಿ ನಂತರದಲ್ಲಿ ಸಾಯುವ ನಿರ್ಧಾರ ಮಾಡಿದ ಅವಳು ಸಂಪೂರ್ಣವಾಗಿ ಅಕ್ಕನಿಗೆ ವಿಚಾರ ತಿಳಿಸುತ್ತಾಳೆ ಇದಕ್ಕೆ ಸ್ಪಂದಿಸಿದ ಅಕ್ಕ ಈ ನಿರ್ಧಾರವನ್ನು ಕೈಬಿಡಬೇಕು ಈ ಸಮಸ್ಯೆಯನ್ನು ಪರಿಹರಿಸುವುದಾಗಿ ಧೈರ್ಯ ನೀಡುತ್ತಾರೆ.
ನಂತರ ಉಪಾಯಮಾಡಿ ಆತನನ್ನು ತವರು ಮನೆಗೆಕರೆಸಿ ಮನೆಯಲ್ಲಿ ಕೂಡಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ ಹಾಗೂ ಬಾಲಕಿಯ ಕುಟುಂಬಕ್ಕೆ ನಾವಿದ್ದೇವೆ ಎಂಬ ಧೈರ್ಯ ನೀಡಿದ್ದಾರೆ. ಊರಿನ ಗ್ರಾಮಸ್ಥರು ಕಾಮುಕ ಗೋಣಪ್ಪನಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು ಹಾಗೂ ಕಾನೂನಿನ ಅಡಿಯಲ್ಲಿ ಬರುವ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

0 Comments