ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ನಗರದ ಹೋಟೆಲ್ ಒಂದರಲ್ಲಿ ಗೋಮಾಂಸದಿಂದ ಪದಾರ್ಥಗಳು ತಯಾರುಗುವುದನ್ನು ಖಚಿತ ಪಡಿಸಿಕೊಂಡ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿ ಈ ಕೃತ್ಯವನ್ನು ಖಚಿತ ಪಡಿಸಿಕೊಂಡು ಹೋಟೆಲ್ ನ್ನು ಸೀಜ್ ಮಾಡಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ : ಆತ್ಮಹತ್ಯೆಗೆ ಶರಣಾದ ಶೃಂಗೇರಿಯ ಯುವಕ
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿನ ಖಾಸಗಿ ಬಸ್ಟ್ಯಾಂಡ್ ಎದುರಿನ ಖುರೇಷಿ ಹೋಟೆಲ್‌ನಲ್ಲಿ ಅಕ್ರಮವಾಗಿ ಗೊಮಾಂಸ ಬಳಸಿಕೊಂಡು ಅಡುಗೆ ತಯಾರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನು ಕಲೆ ಹಾಕಿದ ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ಅವರು ಅಧಿಕಾರಿಗಳಿಗೆ ಈ ಕುರಿತು ಪರಿಶೀಲನೆ ನಡೆಸುವಂತೆ ತಿಳಿಸಿದರು.
ನಗರಸಭಾ ಅಧ್ಯಕ್ಷರಾದ ವರಸಿದ್ದಿ ವೇಣುಗೋಪಾಲ್ ರ ಸೂಚನೆ ಮೇರೆಗೆ ಹೋಟೆಲ್ ನ್ನು ಪರಿಶೀಲನೆ ಮಾಡಲು ತೆರಳಿದ ಅಧಿಕಾರಿಗಳಿಗೆ ಹೋಟೆಲಿನಲ್ಲಿ ಗೋಮಾಂಸ ಪತ್ತೆಯಾಗಿದೆ. ತಕ್ಷಣ ಪ್ರಕರಣ ದಾಖಲಿಸಿದ ಅಧಿಕಾರಿಗಳು ಈ ಬಗ್ಗೆ ಅನೇಕ ದೂರುಗಳು ಈ ಹಿಂದಿನಿಂದಲೂ ಬರುತ್ತಿದ್ದವು ಈಗಲೂ ಈ ಕೃತ್ಯವನ್ನು ಮುಂದುವರೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಆರೋಗ್ಯಾಧಿಕಾರಿ ಶ್ರೀನಿವಾಸ್, ಜಗದೀಶ್, ಪಶುಪಾಲನಾ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಎಂದರು. ಹೊಟೇಲಿನಲ್ಲಿದ್ದ ಐದು ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡು ಗೋಸಂರಕ್ಷಣಾ ಕಾಯ್ದೆಯ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಈ ರೀತಿಯ ಹೋಟೆಲ್‌ಗಳಿಗೆ ನೇರ ಸಂದೇಶವನ್ನು ರವಾನಿಸಿದ್ದು ಮುಂದಿನ ದಿನಗಳಲ್ಲಿ ಈ ರೀತಿಯ ಎಲ್ಲಾ ಹೋಟೆಲುಗಳನ್ನು ಜಪ್ತಿಮಾಡಲಾಗುವುದು ಹಾಗೂ ಕಾನೂನಿನ ಅಡಿಯಲ್ಲಿ ಬರುವ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೃಪೆ : ಪಿತಾಮಹ ಧೈನಿಕ

0 Comments