ಚಿಕ್ಕಮಗಳೂರು : ರಸ್ತೆ ಬದಿಗೆ ಕಸ ಎಸೆಯುತ್ತಿದ್ದವರನ್ನು ಸ್ಥಳೀಯ ಸಾರ್ವಜನಿಕರೇ ತರಾಟೆಗೆ ತೆಗೆದುಕೊಂಡು ಅವರ ಬಳಿಯೇ ಕಸ ಎತ್ತಿಸಿದ ಘಟನೆ ನಡೆದಿದೆ. 

ಚಿಕ್ಕಮಗಳೂರು ನಗರದ 26 ನೆಯ ವಾರ್ಡಿನಲ್ಲಿ ಈ ಘಟನೆ ನಡೆದಿದ್ದು ರಾತ್ರಿಯಾಗುತ್ತಿದ್ದಂತೆ ಕಾದು ಕುಳಿತು ಕಸ ಎಸೆಯುತ್ತಿದ್ದವರನ್ನು ಸ್ಥಳೀಯ ಯುವಕರೇ ಅಡ್ಡಗಟ್ಟಿ ಹಾಕಿದ್ದ ಕಸವನ್ನು ಅವರಿಂದಲೇ ತೆಗೆಸಿದ್ದಾರೆ. 

ಇದನ್ನೂ ಓದಿ : ಹಳೆಯ ನೋಟಿಗೆ ಹೊಸ ನೋಟು, ದುಪ್ಪಟ್ಟು ಹಣ ನೀಡುವುದಾಗಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಬಂಧನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಖತರ್ನಾಕ್ ಆರೋಪಿಗಳ ಸೆರೆ

ಮಧ್ಯರಾತ್ರಿಯವರೆಗೆ ಕಾದು ಎಲ್ಲೆಂದರಲ್ಲಿ ಕಸ ಎಸೆಯುವ ಬದಲು ಬೆಳಗ್ಗೆ ಬರುವ ಕಸದ ವಾಹನಕ್ಕೆ ಕಸ ಹಾಕುವಂತೆ ಯುವಕರು ಕಸ ಹಾಕುತ್ತಿದ್ದವರಿಗೆ ಸೂಚಿಸಿದರು ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದಲ್ಲಿ ಕಸ ಹಾಕಿದವರ ಮನೆಯ ಮುಂದೆಯೇ ಕಸವನ್ನು ತಂದು ಸುರಿಯುವುದಾಗಿ ಯುವಕರು ಎಚ್ಚರಿಕೆ ನೀಡಿದ್ದಾರೆ. 

ನಗರದ ಸ್ವಚ್ಚತೆಗೆ ಎಲ್ಲರೂ ಸಹಕರಿಸಬೇಕು ಅದನ್ನು ಬಿಟ್ಟು ಖಾಲಿಜಾಗ, ಲೈಟ್ ಕಂಬ, ರಸ್ತೆಬದಿಗೆ ಕಸ ಎಸೆಯುವುದನ್ನು ಎಲ್ಲರೂ ಬಿಡಬೇಕು ಚಿಕ್ಕಮಗಳೂರನ್ನು ಸ್ವಚ್ಚನಗರವನ್ನಾಗಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಯುವಕರು ಮನವಿ ಮಾಡಿದರು. 

ತನು ಕೊಟ್ಟಿಗೆಹಾರ, ವರದಿಗಾರರು