ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಸಾಲಬಾಧೆಯನ್ನು ತಡೆಯಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಣಲೂರಿನ ರೈತ ಎಂ.ಎಚ್ ಮಂಜುನಾಥ್ ಎಂಬ 43 ವರ್ಷದ ರೈತ ಬ್ಯಾಂಕ್ ಗಳಲ್ಲಿ ಒಡವೆ ಅಡವಿಟ್ಟು ಸಾಲ ಮಾಡಿದ್ದರು ಹಾಗೂ ಈ ಬಾರಿ ಉತ್ತಮ ಬೆಳೆ ಬೆಳೆಯುವ ನಿರ್ಧಾರ ಮಾಡಿದ್ದರು.
ಇದನ್ನೂ ಓದಿ : ತೋಟದಲ್ಲಿ ಸಂಭವಿಸಿದ ಅಗ್ನಿ ಅವಘಡ ; ಕಾಫಿ, ಸಿಲ್ವರ್ ಗಿಡ ಅಗ್ನಿಗಾಹುತಿ
ಆದರೆ ಅವರ ನಿರೀಕ್ಷೆಯಂತೆ ಈ ಬಾರಿ ಬೆಳೆಬಾರದ ಕಾರಣ ಮನನೊಂದು ವಿಷ ಕುಡಿದಿದ್ದಾರೆ ಎಂದು ಅವರ ಪುತ್ರ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೃತ ಮಂಜುನಾಥ್ ಅವರು ವಿಷಕುಡಿದ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರ ಬೆಳೆನಾಶ ಹೊಂದಿದ ರೈತರ ಜೀವನವನ್ನು ಬೆಂಬಲಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿಗೆತಂದರು ಕೂಡ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಶೀಘ್ರವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಮುಂಬರುವ ದಿನಗಳಲ್ಲಿ ದೇಶದ ಬೆನ್ನೆಲುಬಾದ ರೈತನಿಗೆ ಮಾರಕವಾಗುವ ರೀತಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸ್ಥಳೀಯರು ಹಾಗೂ ಕೃಷಿಕರು ಕೋರಿದ್ದಾರೆ.

0 Comments