ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ರಸ್ತೆಯಲ್ಲಿ ಹರಿಯುತ್ತಿದ್ದ ಹಾವನ್ನು ಬಚಾವ್ ಮಾಡಲು ಹೋಗಿ ಕಾರೊಂದು ನಾಲೆಗೆ ಬಿದ್ದು ಮಹಿಳೆ ಮೃತಪಟ್ಟ ದುರ್ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ತುಂಗಾ ನಾಲೆಗೆ ಕಾರು ಬಿದ್ದಿದ್ದು ಕಾರಿನಲ್ಲಿ ದಂಪತಿಗಳು ಪ್ರಯಾಣ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ನೀರಿನಲ್ಲಿ ಮುಳುಗಿ ಸುಷ್ಮಾ ಎಂಬ ಮಹಿಳೆಯು ಮೃತಪಟ್ಟಿದ್ದಾರೆ. 

ಇದನ್ನೂ ಓದಿ : ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ ತಂದೆಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ ಪೊಲೀಸರು

ದಂಪತಿಗಳಾದ ಸುಷ್ಮಾ ಹಾಗೂ ಚೇತನ್ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದರು ಆ ಸಮಯದಲ್ಲಿ ರಸ್ತೆಯ ಎದುರುಗಡೆ ಹರಿಯುತ್ತಿದ್ದ ಹಾವನ್ನು ಬಚಾವ್ ಮಾಡಲು ಹೋಗಿ ಕಾರು ನೇರವಾಗಿ ನಾಲೆಗೆ ಬಿದ್ದಿದೆ. ಪರಿಣಾಮ ಪತ್ನಿ ಸುಷ್ಮಾ ಸಾವನ್ನಪ್ಪಿದ್ದಾರೆ ಹಾಗೂ ಚೇತನ್ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಇಬ್ಬರನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.