ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಿಂದ ಕಾರ್ಕಳ ಧರ್ಮಸ್ಥಳದ ಕಡೆಗೆ ತೆರಳುವ ಮಾರ್ಗ ಮಧ್ಯೆ ಬೈಕ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಉಂಟಾಗಿದ್ದು ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೊರವಲಯದ ಗ್ರಾಮವಾದ ನೆಮ್ಮಾರು ಸರ್ಕಲ್ ಬಳಿ ಈ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಕ್ಕೊಳಗಾಗಿದ್ದಾನೆ. ಆತನಿಗೆ ನೆಮ್ಮಾರು ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶೃಂಗೇರಿಯ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಪಘಾತಕ್ಕೀಡಾದ ಎರಡೂ ವಾಹನಗಳು ಜಖಂಗೊಂಡಿದ್ದು ಕಾರಿನಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. 

ಇದನ್ನೂ ಓದಿ : ಮುಸ್ಲಿಂ ಹುಡುಗ ಹಿಂದೂ ಹುಡುಗಿಯ ಮಧ್ಯರಾತ್ರಿಯ ಪ್ರೇಮ್ ಕಹಾನಿಗೆ ಸ್ಥಳೀಯರ ಅಡ್ಡಿ ; ಕ್ಲಾಸ್ ತೆಗೆದುಕೊಂಡವರ ಮೇಲೆಯೇ ಕೇಸ್ ದಾಖಲು!

ಶೃಂಗೇರಿಯಿಂದ ಕಾರ್ಕಳ ಧರ್ಮಸ್ಥಳ ಕಳಸವನ್ನು ಸಂಪರ್ಕಿಸುವ ರಸ್ತೆಯು ಅತ್ಯಂತ ಹೆಚ್ಚಿನ ತಿರುವು ಮುರುವುಗಳನ್ನು ಹೊಂದಿದ್ದು ಈ ಪ್ರದೇಶಗಳಲ್ಲಿ ಸಂಚಾರ ಮಾಡುವಾಗ ವಾಹನ ಸವಾರರು ಅತ್ಯಂತ ಹೆಚ್ಚಿನ ಜಾಗರೂಕತೆ ವಹಿಸಿ ರಸ್ತೆನಿಯಮಗಳನ್ನು ಪಾಲಿಸಿಕೊಂಡು ಸಾಗಬೇಕಿದೆ. 

ಸ್ಥಳೀಯರು ಹಾಗೂ ಇತರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತ ಉಂಟಾದ ಸ್ಥಳಕ್ಕೆ ಧಾವಿಸಿದ್ದರು. ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಎಲ್ಲರೂ ಸ್ಥಳದಿಂದ ತೆರಳಿದ್ದಾರೆ.