ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಹಸೀಲ್ದಾರ್ ಅಂಬುಜಾ ನೀಡಿರುವ ಹಕ್ಕು ಪತ್ರಗಳ ಮೇಲೆ ಇ ಸ್ವತ್ತು ಮಾಡಿ ಇದೀಗ ನಡೆದಿರುವ ಅಕ್ರಮವನ್ನು ಮುಚ್ಚಿಹಾಕಲು ಇ ಸ್ವತ್ತುಗಳನ್ನು ರದ್ದುಪಡಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತರಾದ ಶಂಕರ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ :ನ್ಯೂಸ್ ಮಲ್ನಾಡ್ Fact Check; ಹುಲಿ ಪ್ರತ್ಯಕ್ಷ ಸುದ್ದಿ ಹಿಂದಿನ ಅಸಲಿ ಸತ್ಯ ಇಲ್ಲಿದೆ
ಶೃಂಗೇರಿ ತಾಲೂಕಿನ 9 ಗ್ರಾಮ ಪಂಚಾಯತ್ ನಲ್ಲಿ ಬೋಗಸ್ ಹಕ್ಕುಪತ್ರದ ಆಧಾರದ ಮೇಲೆ ಸರ್ಕಾರಿ ಅರಣ್ಯ ಭೂಮಿ ಮತ್ತು ಇತರ ಖಾಲಿ ನಿವೇಶನ ಮತ್ತು ಮನೆಗಳಿಗೆ ಇ ಸ್ವತ್ತು ದಾಖಲಿಸಿ ನಡೆದ ಅಕ್ರಮವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲು ಇ ಸ್ವತ್ತುಗಳನ್ನು ರದ್ದುಗೊಳಿಸಿದ ಪಿಡಿಓ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್ ಎನ್ ಶಂಕರ್ ಎಂಬುವವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ನೀಡಿರುವ ಹಕ್ಕುಪತ್ರಗಳು ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಹಾಗೂ ಸರ್ಕಾರಿ ಅರಣ್ಯ ಭೂಮಿಗೂ ಸೇರಿ ಇ ಸ್ವತ್ತು ದಾಖಲು ಮಾಡಲಾಗಿದೆ ಅಕ್ರಮವನ್ನು ಮುಚ್ಚಿಹಾಕಲು ಯತ್ನಿಸಿದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

0 Comments