ಕೊಟ್ಟಿಗೆಹಾರ : (ನ್ಯೂಸ್ ಮಲ್ನಾಡ್ ವರದಿ)ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಯುವತಿಯೋರ್ವಳ ಶವ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣಾ ವ್ಯಾಪ್ತಿಯ ಹೆಬ್ರಿಗೆ ಗ್ರಾಮದ ಕೆಆರ್ ದೀಕ್ಷಾ ಎಂಬ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದ್ದು ಈ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಉದ್ಯೋಗ ಕೊಡಿಸುವುದಾಗಿ ನಂಬಿಸಿ 12 ಲಕ್ಷ ಹಣ ವಂಚನೆ ಮಾಡಿದ ಖತರ್ನಾಕ್ ವಂಚಕರು

ಸಂಬಂಧಿಕರ ಮನೆಯಲ್ಲಿದ್ದುಕೊಂಡು ಚಿಕ್ಕಮಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಮೃತ ವಿದ್ಯಾರ್ಥಿನಿ ದೀಕ್ಷಾ ಸಕಲೇಶಪುರ ತಾಲೂಕಿನ ಕೊಗೊರಹಳ್ಳಿ ಮೂಲದವಳು. ಕಾಲೇಜಿಗೆ ರಜೆ ಇದ್ದ ಕಾರಣ ದೀಕ್ಷಾ ಮನೆಯಲ್ಲಿದ್ದಳು ಮನೆಯವರು ಬಂದು ನೋಡಿದಾಗ ಆಕೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು, ಇದನ್ನು ಗಮನಿಸಿದ ದೀಕ್ಷಾ ಳ ಸಂಬಂಧಿಕರು ಸಾವಿನ ಕುರಿತು ಅನುಮಾನಗಳಿದ್ದು ಈ ಕುರಿತು ತನಿಖೆ ನಡೆಸುವಂತೆ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅನುಮಾನಾಸ್ಪದ ಸಾವಿನ ಕುರಿತಾಗಿ ಬಣಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಈ ಕುರಿತು ತನಿಖೆ ಆರಂಭಿಸಿದ್ದಾರೆ. ತನಿಖೆಯ ನಂತರದಲ್ಲಿ ಸಾವಿಗೆ ನಿಖರ ಕಾರಣಗಳೇನಿರಬಹುದು ಎಂದು ತಿಳಿಯಬೇಕಿದೆ.

ತನು ಕೊಟ್ಟಿಗೆಹಾರ, ವರದಿಗಾರರು