ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಅನಧಿಕೃತವಾಗಿ ನಿರ್ಮಾಣ ಮಾಡಿರುವ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನರಸಿಂಹರಾಜಪುರ ಘಟಕವು ಹಿಂದೆ ಕರಗುಂದ ಚಲೋಗೆ ಕರೆ ನೀಡಿ ಹೋರಾಟವನ್ನು ನಡೆಸಿತ್ತು, ನಂತರದಲ್ಲಿ ಕೆಲ ದಿನಗಳ ಕಾಲಾವಕಾಶವನ್ನು ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿತ್ತು ಕೇಳಿಕೊಂಡ ಕಾಲಾವಕಾಶ ಮುಕ್ತಾಯವಾದುದರಿಂದ ಇಂದು ಕ್ರಮ ಆಗ್ರಹ ಚಲೋ ನಡೆಸಿತ್ತು.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಡಹೀನಬೈಲು ವ್ಯಾಪ್ತಿಗೆ ಬರುವ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶಿಲುಬೆಯನ್ನು ನಿರ್ಮಿಸಲಾಗಿದೆ ಇದನ್ನು ಶೀಘ್ರವಾಗಿ ತೆರವುಗೊಳಿಸಬೇಕೆಂದು ಬಜರಂಗದಳ ಈ ಹಿಂದೆಯೇ ಆಗ್ರಹಿಸಿತ್ತು ಹಾಗೂ ಕಾಲಾವಕಾಶ ನೀಡಿತ್ತು ಇಷ್ಟು ದಿನಗಳ ಕಾಲ ನಡೆದ ಕಾರ್ಯದ ಕುರಿತಾಗಿ ಮಾಹಿತಿ ಪಡೆಯುವ ಸಲುವಾಗಿ ಇಂದು ಕ್ರಮ ಆಗ್ರಹ ಚಲೋ ನಡೆಸಿದ ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ರಿಂದ ವರದಿ ಪಡೆದರು.

ನರಸಿಂಹರಾಜಪುರದ ಜನಸಂಖ್ಯೆಗಿಂತ ಅಧಿಕವಾಗಿ ಶಿಲುಬೆಗಳಿದೆ, ತಹಶೀಲ್ದಾರ್ ರ ಮನವಿಯಂತೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ, ಹತ್ತು ದಿನಗಳೊಳಗೆ ಶಿಲುಬೆ ತೆರವುಗೊಳಿಸದೆ ಹೋದಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಮುಂದಿನ ಹೋರಾಟದ ರೂಪು ರೇಷೆಗಳನ್ನು ನಡೆಸಲಾಗುವುದು - ಶಶಾಂಕ್ ಗೌಡ ಹೇರೂರು ಬಜರಂಗದಳ ಜಿಲ್ಲಾ ಸಂಯೋಜಕ

ತಹಸೀಲ್ದಾರ್ ನೀಡಿದ ಮಾಹಿತಿಪ್ರಕಾರ ಶಿಲುಬೆ ನಿರ್ಮಿಸಿರುವ ಜಾಗವು ಕಡಹೀನಬೈಲು ಕಿರು ಅರಣ್ಯ ಪ್ರದೇಶಕ್ಕೆ ಸೇರಿದ್ದಾಗಿರುತ್ತದೆ, ಚರ್ಚಿನ ಮುಖ್ಯಸ್ಥರಿಗೆ ಫೆಬ್ರವರಿ ಇಪ್ಪತ್ತರ ವರೆಗೆ ಶಿಲುಬೆ ತೆಗೆಯಲು ಗಡುವು ನೀಡಲಾಗಿದೆ,ನಂತರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಶೀಘ್ರವಾಗಿ ಈ ಘಟನೆ ಇತ್ಯರ್ಥಗೊಳ್ಳಬೇಕು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಕಾರ್ಯ ಪ್ರವೃತ್ತರಾಗಬೇಕು ಈ ರೀತಿಯ ಘಟನೆಗಳನ್ನು ವಿರೋಧಿಸಲು ಹಾಗೂ ತಡೆಗಟ್ಟಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದು ಬಜರಂಗದಳ ನರಸಿಂಹರಾಜಪುರ ಘಟಕ ತಿಳಿಸಿದೆ. 

ಈ ಪ್ರತಿಭಟನೆಯಲ್ಲಿ ಬಜರಂಗದಳದ ಜಿಲ್ಲಾ ಸಂಯೋಜಕ ಹೇರೂರು ಶಶಾಂಕ, ಆರ್.ಡಿ ಮಹೇಂದ್ರ, ತಾಲೂಕು ಅಧ್ಯಕ್ಷರಾದ ಕೆ.ಪಿ ಸುರೇಶ್,ಕರಗುಂದ ಗ್ರಾಮಸ್ಥರು ಹಾಗೂ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.