ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಹಿಜಾಬ್ ಧರಿಸುವ ಕುರಿತಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ನಡುವೆ ನಡೆದ ವಾಗ್ವಾದವನ್ನು ಚಿತ್ರೀಕರಿಸಿದ ಮಾಧ್ಯಮದ ಮೇಲೆ ಹಾಗೂ ಕಾಲೇಜಿನ ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗೆ ಮಡಿಕೇರಿಯ ಮುಸ್ಲಿಂ ಜಮಾತ್ ಗಳ ಒಕ್ಕೂಟ ದೂರುಸಲ್ಲಿಸಿದೆ.
ಈ ಹಿಂದೆ ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಹಿಜಾಬ್ ಧರಿಸುವುದಾಗಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದು ಪ್ರಾಂಶುಪಾಲರು ಹಾಗೂ ಉಳಿದ ಕಾಲೇಜು ಪ್ರಾಚಾರ್ಯರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಹೈಕೋರ್ಟ್ ನ ಮಧ್ಯಂತರ ಆದೇಶದಂತೆ ಯಾವುದೇ ಧಾರ್ಮಿಕವಾಗಿ ಬಿಂಬಿಸುವ ವಸ್ತ್ರವನ್ನು ಧರಿಸದೇ ತರಗತಿಯೊಳಗೆ ಕೂರಲು ಮಾತ್ರ ಆದೇಶವಿರುವುದು ಆದ ಕಾರಣ ಹಿಜಾಬ್ ತೆಗೆದು ತರಗತಿ ಪ್ರವೇಶ ಮಾಡುವಂತೆ ಪ್ರಾಂಶುಪಾಲರು ತಿಳಿಸಿದ್ದರು.
ಇದನ್ನೂ ಓದಿ : ಇಲಾಖೆಯ ಅಭಿಪ್ರಾಯ ಪಡೆಯದೇ ಹಕ್ಕುಪತ್ರ ವಿತರಣೆ ಹಿನ್ನೆಲೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಇ ಸ್ವತ್ತು ಮಾಡದಂತೆ ಅರಣ್ಯ ಇಲಾಖೆಯಿಂದ ಪತ್ರ.
ಆದರೆ ಪ್ರಾಂಶುಪಾಲರ ಆದೇಶವನ್ನು ಪಾಲಿಸದ ವಿದ್ಯಾರ್ಥಿನಿಯರು ತರಗತಿಗೆ ಹಿಜಾಬ್ ಧರಿಸಿಯೇ ತರಗತಿ ಪ್ರವೇಶಮಾಡಲು ಬಿಡಬೇಕೆಂದು ಪಟ್ಟುಹಿಡಿದಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಕೇಸು ದಾಖಲಿಸುವುದಾಗಿ ಪ್ರಾಂಶುಪಾಲರು ಹೇಳಿದ್ದರು ಇದೀಗ ಮುಸ್ಲಿಂ ಜಮಾತ್ ಗಳ ಒಕ್ಕೂಟ ಈ ಕುರಿತಾಗಿ ದೂರು ನೀಡಲು ಮುಂದಾಗಿದೆ.
ವಿದ್ಯಾರ್ಥಿನಿಯರನ್ನು ಬೆದರಿಸುವ ಕೆಲಸ ಕಾಲೇಜಿನ ಪ್ರಾಂಶುಪಾಲರಿಂದ ನಡೆದಿದೆ. ಮಾಧ್ಯಮಗಳೂ ಈ ದೃಶ್ಯಗಳನ್ನು ಚಿತ್ರೀಕರಣ ಮಾಡಿ ವ್ಯಾಪಕವಾಗಿ ಪ್ರಸಾರಮಾಡಿದೆ ಇದರಿಂದಾಗಿ ವಿದ್ಯಾರ್ಥಿನಿಯರು ಮಾನಸಿಕವಾಗಿ ತೊಂದರೆಗೀಡಾಗಿದ್ದರೆ ಎಂದು ಮಡಿಕೇರಿಯ ಮುಸ್ಲಿಂ ಜಮಾಅತ್ ಗಳ ಒಕ್ಕೂಟ ದೂರು ನೀಡಿದೆ.
ಹೈಕೋರ್ಟ್ ಆದೇಶಕ್ಕೇ ತಲೆದೂಗದೆ ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿರುವುದು ಎಷ್ಟರಮಟ್ಟಿಗೆ ಸರಿ, ನೀವುಗಳು ಕೋರ್ಟ್ ಆದೇಶ ಪಾಲಿಸದೆ ಧಿಕ್ಕರಿಸಿ ಇತ್ತ ನಿಷೇಧಾಜ್ಞೆಯ ನಡುವೆಯೂ ಗುಂಪುಗೂಡಿ ವಿದ್ಯಾರ್ಥಿನಿಯರು ಕಾಲೇಜಿನ ಒಳ ಸೇರಿ ಪ್ರತಿಭಟನೆ ಮಾಡಿರುವುದು ನಿಯಮದ ಉಲ್ಲಂಘನೆ ಅಲ್ಲವೇ ಇದನ್ನು ಪ್ರಶ್ನಿಸಿ ಈ ಕುರಿತು ದೂರು ನೀಡುವವರಾರು ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.
ಒಟ್ಟಾರೆ ಹಿಜಾಬ್ ಧರಿಸುವ ಕುರಿತಾದ ವಿವಾದವು ದಿನೇ ದಿನೇ ಒಂದಿಲ್ಲೊಂದು ಹೊಸ ರೂಪ ಪಡೆದುಕೊಂಡು ಜ್ಞಾನ ದೇಗುಲಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣಮಾಡಿದೆ.

0 Comments