ಮಲೆನಾಡು : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಸಂಘ ಪರಿವಾರದ ವತಿಯಿಂದ ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಸೀಗೆಹಟ್ಟಿ ಹರ್ಷನಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.
ಶೃಂಗೇರಿಯ ಕಟ್ಟೆ ಬಾಗಿಲಿನಲ್ಲಿ ಸೇರಿದ ಹಿಂದೂ ಸಮಾಜ ಹಾಗೂ ಸಂಘಟನೆಗಳ ಕಾರ್ಯಕರ್ತರು ಹರ್ಷ ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿದರು. ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಶ್ರೇಯಸ್ ಕವಿಲುಕುಡಿಗೆ ಈ ಹಿಂದಿನಿಂದಲೂ ದೇಶ ದ್ರೋಹದ ಕೆಲಸಗಳನ್ನು ಎಸಗುತ್ತಿರುವ SDPI PFI ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಈ ಹಿಂದಿನಿಂದಲೂ ನಾವು ರಸ್ತೆಗಿಳಿದು ಪ್ರತಿಭಟಿಸಿದ್ದರು ಕೂಡ ಇಂದಿಗೂ ಆ ಕೆಲಸ ಆಗಿಲ್ಲ, ಮೊನ್ನೆ ಹರ್ಷನ ಶವಯಾತ್ರೆಯ ವೇಳೆ ಮೆರವಣಿಗೆಯಲ್ಲಿದ್ದವರ ಮೇಲೆ ಕಲ್ಲು ತೂರಾಟ ನಡೆದಿದೆ ಈ ಘಟನೆಗಳ ಹಿಂದಿರುವವರ ವಿರುದ್ದ ಈಗಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ :
ನಂತರದಲ್ಲಿ ಮಾತನಾಡಿದ ಶೃಂಗೇರಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಕಾರ್ಯಕರ್ತರ ನೋವಿಗೆ ಸದಾ ನಾವು ಜೊತೆನಿಲ್ಲಬೇಕು, ಕೇವಲ ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಾಗುತ್ತದೆ ಬಜರಂಗದಳದ ಓರ್ವ ಕಾರ್ಯಕರ್ತನ ಮೇಲೆ ಕೇವಲ ಒಂದೇ ಪ್ರಕರಣ ಇದ್ದರೂ ಕೂಡ ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತದೆ ಈ ರೀತಿಯ ಅವೈಜ್ಞಾನಿಕ ನಡೆಗಳನ್ನು ತಕ್ಷಣ ನಿಲ್ಲಿಸಬೇಕು ಹರ್ಷನ ಕೊಲೆಗೆ ನ್ಯಾಯ ದೊರೆಯಬೇಕು ಹಿಂದೂಗಳೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಹೋರಾಡಬೇಕು ಎಂದರು.
ನಂತರ ಮಾತನಾಡಿದ ಬಿಜೆಪಿ ಪ್ರಧಾನಕಾರ್ಯದರ್ಶಿ ವೇಣುಗೋಪಾಲ್ ಇಂದು ನಾವು ಈ ವಿಚಾರಕ್ಕಾಗಿ ಸೇರಿರುವುದು ಅತ್ಯಂತ ವಿಷಾದನೀಯ ಸಂಗತಿ, ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಲೇ ಬಂದಿದೆ ಈ ಕೃತ್ಯಗಳಿಗೆ ಅತೀ ಕಠಿಣ ಶಿಕ್ಷೆಯಾಗಬೇಕು, ಗೌರಿ ಲಂಕೇಶ್ ಹತ್ಯೆಯ ಕುರಿತಾಗಿ ಇನ್ನೂ ವಿಚಾರಣೆ ನಡೆಯುತ್ತಿದೆ ಆದರೆ ಅದರ ಮುಂಚೆಯೇ ಆರೋಪಿಗಳ ಮೇಲೆ ಕೋಕಾ ಕಾಯ್ದೆ ದಾಖಲು ಮಾಡಲಾಗಿದೆ ಅಂತೆಯೇ ಹರ್ಷನ ಕೊಲೆ ಹಿಂದಿರುವ ಆರೋಪಿಗಳ ಮೇಲೆ ಕೋಕಾ ಕಾಯ್ದೆ ದಾಖಲು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು ಹಿಂದೂಗಳು ಸಂಘಟಿತರಾಗಿ ಹಿಂದೂ ಯುವಕರ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಶೃಂಗೇರಿಯ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
ತೀರ್ಥಹಳ್ಳಿ: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯನ್ನು ವಿರೋಧಿಸಿ ಇಂದು ತೀರ್ಥಹಳ್ಳಿಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಪ್ರತಿಭಟನೆಯನ್ನು ನಡೆಸಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು ಈ ಕುರಿತು ಮಾತನಾಡಿದ ಸಂಘಟನೆಯ ಮುಖಂಡರು ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ನೇಣಿಗೇರಿಸಬೇಕು ಇಲ್ಲದೇ ಹೋದಲ್ಲಿ ಎನ್ಕೌಂಟರ್ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಹರ್ಷ ಓರ್ವ ಬಜರಂಗದಳದ ಕಾರ್ಯಕರ್ತನಾಗಿ ಎಲ್ಲಾ ವಲಯದಲ್ಲೂ ಸೇವೆ ಮಾಡಿದ್ದಾನೆ. ದೇಶಸೇವೆಗೆ ಧರ್ಮದ ಉಳಿವಿಗಾಗಿ ಹರ್ಷ ಹಗಲಿರುಳು ಶ್ರಮಿಸುತ್ತಿದ್ದ ಇದನ್ನು ಸಹಿಸದ ಮತಾಂಧರು ಹರ್ಷನನ್ನು ಕೊಲೆಗೈದಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಲೋಹಿತಾಶ್ವ ಅವರು ಶಿವಮೊಗ್ಗದಲ್ಲಿ ಹರ್ಷನ ಹತ್ಯೆಯನ್ನು ಮುಸ್ಲಿಂ ಮೂಲಭೂತವಾದಿಗಳು ನಡೆಸಿದ್ದಾರೆ ಈ ಕೃತ್ಯಕ್ಕೆ ಪ್ರೇರಣೆ ನೀಡುವವರು ಕೇವಲ ಹೊರರಾಜ್ಯಗಳಲ್ಲಿಲ್ಲ ಶಿವಮೊಗ್ಗ, ತೀರ್ಥಹಳ್ಳಿಗಳಲ್ಲೂ ಇದ್ದಾರೆ ಎಂದರು. ಈ ಕೊಲೆಯನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ ಹರ್ಷ ತನ್ನ ಜೀವನವನ್ನು ಹಿಂದುತ್ವಕ್ಕಾಗಿ ಮುಡಿಪಾಗಿಟ್ಟಯುವಕ ಕೇವಲ ಹೇಳಿಕೆಗಳ ಮೂಲಕ ಹಿಂದೂಗಳನ್ನು ಸಮಾಧಾನ ಮಾಡುವ ಪ್ರಯತ್ನವನ್ನು ರಾಜಕೀಯ ವ್ಯಕ್ತಿಗಳು ಮಾಡಬಾರದು ಎಂದರು.
ಅತೀ ಶೀಘ್ರವಾಗಿ ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.

0 Comments