ಬಣಕಲ್ : (ನ್ಯೂಸ್ ಮಲ್ನಾಡ್ ವರದಿ) ಮರ ಕಡಿಯುವ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಯುವಕನ ಮೇಲೆ ಬಿದ್ದು ಯುವಕ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು ದಾಸರಹಳ್ಳಿಯ ನಿವಾಸಿ ಪ್ರಕಾಶ್ ಎಂಬ ಯುವಕ ಮೃತ ದುರ್ದೈವಿ. ಇಂದು ಬೆಳಗ್ಗೆ ತೋಟದಲ್ಲಿ ಮರ ಕಡಿಯುವ ಸಂದರ್ಭದಲ್ಲಿ ಅಲ್ಲೇ ನಿಂತಿದ್ದ ಪ್ರಕಾಶ್ ನ ಮೇಲೆ ಆಕಸ್ಮಿಕವಾಗಿ ಮರದ ರೆಂಬೆ ಬಿದ್ದಿದ್ದು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ : ನಾಳೆ ಶೃಂಗೇರಿಗೆ ಆಗಮಿಸಲಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಮೂಡಿಗೆರೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆತನಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದ ಕಾರಣ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಯುವಕನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರು ಹಾಗೂ ಸ್ಥಳೀಯರು ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನು ಕೊಟ್ಟಿಗೆಹಾರ, ವರದಿಗಾರರು

0 Comments