ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಅವರು ಚಿಕ್ಕಮಗಳೂರು ಸುತ್ತ ಮುತ್ತಲಿನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ತೆರಳಿ ಹಲವಾರು ಉದ್ಘಾಟನಾ ಮತ್ತು ಶಂಕುಸ್ಥಾಪನಾ ಕಾರ್ಯಗಳನ್ನು ನೆರವೇರಿಸಿದರು.
ಚಿಕ್ಕಮಗಳೂರಿನ ದಾಸರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಟಿ ರಸ್ತೆಯಿಂದ ಬೈನಕುಲ್ ವರೆಗೆ ರಸ್ತೆ ಉದ್ಘಾಟನೆ, ಮೂಲ ದಾಸರಹಳ್ಳಿ ರಸ್ತೆ ಶಂಕುಸ್ಥಾಪನೆ, ದಾಸರಹಳ್ಳಿಯ ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆ ಮತ್ತು ಅರಸೀನಗುಪ್ಪೆ ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆಯನ್ನು ಶಾಸಕ ಸಿ.ಟಿ ರವಿ ನಡೆಸಿದರು.
ಇದನ್ನೂ ಓದಿ : ಬದುಕಿದ್ದಾಗ ಸಾವಿರಾರು ಜನರ ಸೇವೆಗೈದ ನರ್ಸ್ ಗಾನವಿ ದಿಢೀರ್ ಸಾವು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 22 ರ ಯುವತಿ
ಮಲ್ಲೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಾವಿಕಟ್ಟೆ ಗ್ರಾಮದ ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆ,ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಎರಡು ರಸ್ತೆ ಉದ್ಘಾಟನೆ, ರಸ್ತೆ ಶಂಕುಸ್ಥಾಪನೆ, ನಿಂಗೇನಹಳ್ಳಿ ಕನಕ ಭವನ ಸ್ಥಳ ಪರಿಶೀಲನೆ, ಕೊಂಬುಗತ್ತಿಯಿಂದ ಕಾಮೇನಹಳ್ಳಿಗೆ ತೆರಳುವ ರಸ್ತೆ ಉದ್ಘಾಟನೆ, ಭಕ್ತರಹಳ್ಳಿ ಅಂಬೇಡ್ಕರ್ ಭವನದ ಸ್ಥಳ ಪರಿಶೀಲನೆಯನ್ನು ಶಾಸಕರು ನಡೆಸಿದ್ದಾರೆ.
ನಂತರದಲ್ಲಿ ತೊಗರಿಹಂಕಲ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದ ರಸ್ತೆ ಹಾಗೂ ಅಂಗನವಾಡಿ ಶಂಕುಸ್ಥಾಪನೆ, ಅರವಿಂದನಗರ ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ, ಗುಡ್ಡೆಹಳ್ಳಿ ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ, ಕಂಬಿಹಳ್ಳಿ ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ, ಅತ್ತಿಗೆರಿ ಅಂಬೇಡ್ಕರ್ ಭವನ ಸ್ಥಳ ಪರಿಶೀಲನೆ ಹಾಗೂ ಗಾಳಿಪೂಜೆ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಯ ವೀಕ್ಷಣೆಯನ್ನು ಮಾಡಿದರು.
ನಂತರ ಈ ಕುರಿತಾಗಿ ಮಾತನಾಡಿದ ಅವರು ಜನರು ನನ್ನನ್ನು ನಂಬಿ ಮತನೀಡಿ ಪ್ರೀತಿಯಿಂದ ಗೆಲ್ಲಿಸಿದ್ದಾರೆ ನಾನೆಂದಿಗೂ ಅವರಿಗೆ ಚಿರಋಣಿ ಅವರ ಋಣ ತೀರಿಸುವ ಕೆಲಸವನ್ನು ಅಭಿವೃದ್ದಿಯ ಮೂಲಕ ನಡೆಸುತ್ತಿದ್ದೇನೆ ಮುಂದೆಯೂ ಕೂಡ ಜನರ ಒಳಿತಿಗಾಗಿ ಶ್ರಮಿಸುತ್ತೇನೆ ಎಂದರು.
ಅನುದಾನಗಳ ಕುರಿತಾಗಿ ಮಾತನಾಡಿದ ಅವರು ಒಂದೇ ಗ್ರಾಮ ಪಂಚಾಯಿತಿಗೆ 09 ಕೋಟಿ ರೂ ಅನುದಾನವನ್ನು ಇಲ್ಲಿಯವರೆಗೆ ಯಾರೂ ಕೂಡ ನೀಡಿಲ್ಲ ಆದರೆ ನಾನು ಜನರ ಉನ್ನತಿಗಾಗಿ ಶ್ರಮಿಸಿ ಈ ಕಾರ್ಯವನ್ನು ಮಾಡಿದ್ದೇನೆ ಜನರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ಇನ್ನೂ ಎತ್ತರೆತ್ತರಕ್ಕೆ ಸಾಗಲಿದೆ ಎಂದರು. ಈ ಸಂದರ್ಭದಲ್ಲಿ ದಾಸರಹಳ್ಳಿ, ಮಲ್ಲೇನಹಳ್ಳಿ ಹಾಗೂ ತೊಗರಿಹಂಕಲ್ ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಸದಸ್ಯರುಗಳು, ಜಿಲ್ಲಾ ಪಂಚಾಯತ್ ನ ಸದಸ್ಯರು, ಸ್ಥಳೀಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

0 Comments