ಅಜ್ಜಂಪುರ : (ನ್ಯೂಸ್ ಮಲ್ನಾಡ್ ವರದಿ) 15 ದಿನಗಳ ಹಿಂದೆ ಓರ್ವ ಅನಾಮದೇಯ ವ್ಯಕ್ತಿ ಫೋನ್ನ ಮುಖಾಂತರವಾಗಿ ಕರೆಮಾಡಿ ವಂಚಿಸಿ ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಷಣ್ಮುಖ ಎಂಬ ವ್ಯಕ್ತಿಗೆ ಕರೆ ಮಾಡಿದ ವ್ಯಕ್ತಿಯು ತನ್ನ ಹೆಸರು ರಾಮಪ್ಪ, ಚನ್ನಗಿರಿಯ ಆದಿಚುಂಚನಗಿರಿ ಮಠದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡು ನಂತರದ ದಿನಗಳಲ್ಲಿ ಒಂದು ದಿನ ಆತನು ಕರೆ ಮಾಡಿ ಅವರ ಬಳಿ ಹಳೆಯ ರೂ. 100 ಮುಖ ಬೆಲೆಯ ನೋಟುಗಳು ಮತ್ತು ಹೊಸ ರೂ. 2000 ಮುಖ ಬೆಲೆಯ ನೋಟುಗಳಿದ್ದು, ನೀವು ರೂ. 5 ಲಕ್ಷ ಹಣವನ್ನು 500 ಮತ್ತು 200 ಮುಖ ಬೆಲೆಯ ನೋಟುಗಳಲ್ಲಿ ನೀಡಿದ್ದಲ್ಲಿ, ಅದರ ಬದಲಾಗಿ 100 ಮತ್ತು 2000 ಮುಖಬೆಲೆಯ ನೋಟುಗಳಲ್ಲಿ ಎರಡು ಪಟ್ಟು ಹೆಚ್ಚು ಹಣವನ್ನು ಪಾವತಿಸಲಾಗುವುದೆಂದು ಪ್ರಸ್ತಾಪ ಮಾಡಿದನು.
ಇದನ್ನೂ ಓದಿ :ಕಾಡಾನೆ ದಾಳಿಗೆ ಕಂಗಾಲಾದ ರೈತ ; ಅನೇಕರ ಬೆಳೆ ನಾಶ
ದಿನಾಂಕ 17/01/2022 ರಂದು ಅಜ್ಜಂಪುರ ರೈಲು ನಿಲ್ದಾಣದ ಬಳಿ ಷಣ್ಮುಖ ಮತ್ತು ರಾಮಪ್ಪ ಭೇಟಿಯಾದಾಗ ರಾಮಪ್ಪ ನೋಟುಗಳನ್ನು ಮಾದರಿಯಾಗಿ ನೀಡಿ 5 ಲಕ್ಷ ತರಲು ಹೇಳಿದನು ದಿನಾಂಕ25/01/2022 ರಂದು ಷಣ್ಮುಖ ಅಜ್ಜಂಪುರಕ್ಕೆ ಬಂದು ಬಸ್ ನಿಲ್ದಾಣದ ಬಳಿ ರಾಮಪ್ಪ ಎಂಬುವವರಿಗೆ 5 ಲಕ್ಷ ರೂ. ಅದಕ್ಕೆ ಬದಲಾಗಿ ರಾಮಪ್ಪ ಒಂದು ಪೆಟ್ಟಿಗೆಯನ್ನು ಕೊಟ್ಟು ಅದರಲ್ಲಿ 10 ಲಕ್ಷ ಹಣ ಇದೆ, ಮನೆ ತಲುಪಿದ ನಂತರ ಬಾಕ್ಸ್ ತೆರೆಯಲು ಹೇಳಿದರು. ಅನುಮಾನಗೊಂಡು ದೂರುದಾರರು ಪೆಟ್ಟಿಗೆಯನ್ನು ತೆರೆದಾಗ ಕೇವಲ ಅದರಲ್ಲಿ ಖಾಲಿ ಕಾಗದದೊಂದಿಗೆ 2000 ನಗದು ಮಾತ್ರ ಇರುತ್ತದೆ ಈ ರೀತಿಯಾಗಿ ವಂಚಕರು ಮೋಸ ಮಾಡಿರುತ್ತಾರೆ ಎಂದು ದೂರು ಷಣ್ಮುಖರವರು ನೀಡಿರುತ್ತಾರೆ.
ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಪೊಲೀಸ್ ನಿರೀಕ್ಷಕರು, ಅಜ್ಜಂಪುರ ಪೊಲೀಸ್ ಠಾಣೆ ರವರ ನೇತೃತ್ವದ ಪೊಲೀಸ್ ತಂಡವು ಆರೋಪಿಗಳಾದ ದಾಮೋದರ್ ಬಿನ್ ಹನುಮಂತಪ್ಪ, 36 ವರ್ಷ, ಬೆಡ್ ಶೀಟ್ ಕೆಲಸ, ವಾಸ ಗೋಪಾಲಾ ಸಿ ಬ್ಲಾಕ್, ಶಿವಮೊಗ್ಗ, ಶಶಿಕುಮಾರ್ ಬಿನ್ ಮುನಿವೆಂಕಟಪ್ಪ, 23 ವರ್ಷ, ಕೂಲಿ ಕೆಲಸ, ವಾಸ ಬಿ.ಕೋಡಿಹಳ್ಳಿ, ಬೀರೂರು, ಕಡೂರು ತಾಲೂಕು ಹಾಗೂಚೆಲುವಾ ಬಿನ್ ರಾಪ್ಪ, 19 ವರ್ಷ, ಕೂಲಿ ಕೆಲಸ, ವಾಸ ಹುಲಿದೇವರಮನೆ, ಸಾಗರ ತಾಲೂಕು ಶಿವಮೊಗ್ಗ ಎಂಬ ಈ ಮೂವರನ್ನು ಯಶಸ್ವಿಯಾಗಿ ಬಂಧಿಸಿರುತ್ತಾರೆ ಹಾಗೂ
ಆರೋಪಿಗಳಿಂದ ರೂ. 5 ಲಕ್ಷ ನಗದು ಮತ್ತು ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ಜುಲೈ 2020 ರಲ್ಲಿ ಅಜ್ಜಂಪುರದ ವ್ಯಾಪ್ತಿಯ ಆಸಂದಿ ಗ್ರಾಮದ ಮನೆಯೊಂದಕ್ಕೆ ನುಗ್ಗಿ 80 ಗ್ರಾಂ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದ ಆರೋಪಿಯನ್ನು ಅಜ್ಜಂಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 3.21 ಲಕ್ಷ ಬೆಲೆಯ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಠಾಣಾ ಸಿಬ್ಬಂದಿಗಳಿಗೆ ಹಾಗೂ ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಮೇಲಧಿಕಾರಿಗಳು ಅಭಿನಂದಿಸಿದ್ದಾರೆ.

0 Comments