ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಅನೇಕ ಕಾಲೇಜುಗಳಲ್ಲಿ ವಿವಾದ ಉಂಟುಮಾಡಿರುವ ಹಿಜಾಬ್ ಹಾಗೂ ಕೇಸರಿ ಶಾಲಿನ ಸಮರ ಈಗ ಇನ್ನೊಂದು ಹಂತಕ್ಕೆ ತಲುಪಿದೆ ಇಷ್ಟು ದಿನಗಳ ಕಾಲ ಕೇಸರಿ ಶಾಲು ಹಾಗೂ ಹಿಜಾಬ್ ನ ನಡುವೆ ಉಂಟಾಗಿದ್ದ ಸಮರದ ಮಧ್ಯೆ ಇದೀಗ ಚಿಕ್ಕಮಗಳೂರಿನ ಕಾಲೇಜಿನಲ್ಲಿ ನೀಲಿ ಬಣ್ಣದ ಶಾಲು ಕಾಣಲಾರಂಭಿಸಿದೆ.

ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಕಾಲೇಜಿನಲ್ಲಿ ಮೊನ್ನೆಯ ವರೆಗೆ ಹಿಜಾಬ್ ಹಾಗೂ ಕೇಸರಿ ಶಾಲಿನ ನಡುವಿನ ಸಮರ ಜೋರಾಗಿತ್ತು ಈ ಮಧ್ಯೆ ಸರ್ಕಾರ ವಸ್ತ್ರ ಸಂಹಿತೆಯ ಕುರಿತಾಗಿ ನಡವಳಿ ಬಿಡುಗಡೆಮಾಡಿತ್ತು. ಆದರೆ ಪ್ರಸ್ತುತ ಇಂದು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಕೇಸರಿ ಹಾಗೂ ನೀಲಿ ಶಾಲುಗಳು ರಾರಾಜಿಸುತ್ತಿದೆ. ನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಭೀಮ್ ಜೈ ಜೈ ಭೀಮ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗೆ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರೆ ಇನ್ನೊಂದೆಡೆ ಜೈ ಶ್ರೀರಾಮ ಘೋಷಣೆ ಮೊಳಗಿದೆ. 

ಇದನ್ನೂ ಓದಿ : ಕೊಪ್ಪ ಪೊಲೀಸರ ವಿಶೇಷ ಕಾರ್ಯಾಚರಣೆ ; ವಾಹನಗಳಲ್ಲಿ ಅಳವಡಿಸಲಾಗಿದ್ದ ಫೋಕಸ್ ಲೈಟ್ಗಳ ತೆರವು

ಸರ್ಕಾರದ ಆದೇಶವನ್ನು ಮೀರಿಯೂ ಕೂಡ ಅನೇಕರು ಹಿಜಾಬ್ ಹಾಗೂ ಬುರ್ಖಾ ಧರಿಸಿ ಬರುತ್ತಿದ್ದಾರೆ. ಆದರೆ ಬುರ್ಖಾದ ಒಳಗೆ ನಿಜವಾಗಿಯೂ ಅದೇ ವಿದ್ಯಾರ್ಥಿನಿಯೇ ಇದ್ದಾಳ ಎಂಬ ಅನುಮಾನ ಮೂಡುತ್ತಿದೆ. ಕಾಲೇಜಿನ ಆಡಳಿತ ಮಂಡಳಿ ಕೂಡ ಸರ್ಕಾರ ಹೊರಡಿಸಿದ ರೂಲ್ಸ್ ಬ್ರೇಕ್ ಮಾಡುತ್ತಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರದ ಆದೇಶದ ವಿರುದ್ಧ ಹೋಗುವುದು ಹಾಗೂ ಕೋರ್ಟ್ ನಲ್ಲಿ ವಿಚಾರಣೆಯಲ್ಲಿ ಇರುವಾಗ ತೀರ್ಪು ಬರುವವರೆಗೂ ಕಾಯದೆ ಸರ್ಕಾರದ ನಿಯಮವನ್ನು ಧಿಕ್ಕರಿಸುವುದು ಅಂಬೇಡ್ಕರ್ ರಿಗೆ ಮಾಡುವ ಅಪಮಾನ.

- ಕೇಸರಿ ಶಾಲು ಧರಿಸಿದ ವಿದ್ಯಾರ್ಥಿ

ಸರ್ಕಾರದ ಆದೇಶಕ್ಕೆ ಎಳ್ಳು ನೀರು ಬಿಟ್ಟ ಆಡಳಿತ ಮಂಡಳಿ :

ವಿದ್ಯಾರ್ಥಿಗಳ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದ್ದರು ಕೂಡ ಪ್ರಾಂಶುಪಾಲರು ಹಾಗು ಆಡಳಿತ ಮಂಡಳಿಗಳು ಮೌನಕ್ಕೆ ಶರಣಾಗಿದೆ. ಇತ್ತ ಸರ್ಕಾರದ ಆದೇಶವಿದ್ದರೂ ಕೂಡ ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕೇವಲ ID ಕಾರ್ಡ್ ಪರಿಶೀಲಿಸಿ ಒಳ ಕಳಿಸಲಾಗುತ್ತಿದ್ದು, ಸರ್ಕಾರ ಹೊರಡಿಸಿದ ಆದೇಶಕ್ಕೆ ಎಳ್ಳು ನೀರು ಬಿಟ್ಟಿವೆ.

ಜಾತಿ ಧರ್ಮ ಮತ ಬೇಧವನ್ನು ಮರೆತು ಒಗ್ಗಟ್ಟಾಗಿ ಇರಬೇಕಾದ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ಸಮಸ್ಯೆ ಎದುರಾದಾಗ ಸಂಬಂಧಪಟ್ಟವರು ಈ ಕುರಿತು ಸೂಕ್ತ ನಿರ್ಣಯಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.