ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಚಂದ್ರಶೇಖರ ಗ್ರಾಮದ ಸರ್ವೇ ನಂಬರ್ 58/1 ರ ಜಮೀನಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದು ನಾಟಾ ತಯಾರಿಸಿದ ಜಾಗವನ್ನು ಪತ್ತೆಹಚ್ಚಿದ ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ಆರೋಪಿ ನಜೀರ್ ಎಂಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ :ಅಕ್ರಮ ಭೂ ಮಂಜೂರಾತಿ ಆರೋಪ ಹಿನ್ನೆಲೆ : ಶೃಂಗೇರಿ ತಹಸೀಲ್ದಾರ್ ಅಂಬುಜಾ ಕರ್ತವ್ಯದಿಂದ ಅಮಾನತು
ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ 07 ಸಾಗುವಾನಿ ನಾಟಾಗಳನ್ನು ವಶಪಡಿಸಿಕೊಂಡ ಇಲಾಖೆಯ ಸಿಬ್ಬಂದಿಗಳು ಆರೋಪಿ ನಜೀರ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ಮರ ಕಡಿದು ಅರಣ್ಯ ನಾಶ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮುಂಬರುವ ದಿನಗಳಲ್ಲಿ ಯಾರು ಕೂಡ ಈ ರೀತಿಯ ಕೃತ್ಯಗಳನ್ನು ಎಸಗಬಾರದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರು ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಕೆ.ಆರ್ ಸತೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ ಜಯೇಶ್ ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಆರ್ ವೆಂಕಟೇಶ್, ಉಪವಲಯ ಅರಣ್ಯಾಧಿಕಾರಿ ನಂದೀಶ್, ನಾರಾಯಣ್,ವೆಂಕಟೇಶ್,ದಿನೇಶ್ ಹಾಗೂ ಅರಣ್ಯ ರಕ್ಷಕರಾದ ಹೇಮಂತ್, ಕುಮಾರಸ್ವಾಮಿ,ಈಶ್ವರ್ ಹಾಗೂ ಚಾಲಕ ಸುನೀಲ್ ಭಾಗವಹಿಸಿದ್ದರು.
ತನು ಕೊಟ್ಟಿಗೆಹಾರ, ವರದಿಗಾರರು

0 Comments