ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ ) 94ಸಿ ಅಡಿಯಲ್ಲಿ ಅಕ್ರಮವಾಗಿ ಹಕ್ಕುಪತ್ರಗಳ ವಿತರಣೆ ನಡೆಸಿದ ಶೃಂಗೇರಿ ತಹಶೀಲ್ದಾರ್ ಅಂಬುಜಾ ಕರ್ತವ್ಯ ಲೋಪದ ಅಡಿಯಲ್ಲಿ ಅಮಾನತುಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಛೇರಿಯಲ್ಲಿ ಅಕ್ರಮವಾಗಿ ಹಕ್ಕು ಪತ್ರಗಳ ವಿತರಣೆ ನಡೆಸಿ ನಂತರದಲ್ಲಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ತನಿಖೆಗೆ ಒಳಪಟ್ಟು ಜೈಲು ವಾಸವನ್ನು ಕೂಡ ಅನುಭವಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳು ಕೂಡ ತಂಡವೊಂದನ್ನು ರಚಿಸಿ ಈ ಕುರಿತು ತನಿಖೆ ನಡೆಸಲು ಸೂಚಿಸಿದ್ದರು.
ಇದನ್ನೂ ಓದಿ : ಖತರ್ನಾಕ್ ಕಳ್ಳರ ಕೈಚಳಕ; ಮನೆಯ ಬೀರುವಿನಲ್ಲಿರಿಸಿದ್ದ ಹಣ ಒಡವೆ ಕಳ್ಳತನ
ತನಿಖೆಯಲ್ಲಿ ಸಹ ಮೇಲ್ನೋಟಕ್ಕೆ ಅಕ್ರಮ ಮಾಡಿರುವುದು ಕಂಡುಬಂದಿದ್ದು ಅಂಬುಜಾ ಸೇರಿ ಒಟ್ಟು ಆರು ಸಿಬ್ಬಂದಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈಗ ಅಂಬುಜಾ ಮೇಲೆ ಸರ್ಕಾರ ಕ್ರಮ ಕೈಗೊಂಡಿದ್ದು ಬೇಜವಾಬ್ದಾರಿತನ, ಕರ್ತವ್ಯಲೋಪ, ದುರ್ನಡತೆ ಮುಂತಾದ ವಿಚಾರಗಳನ್ನು ಪರಿಗಣಿಸಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬುಜಾರನ್ನು ಅಮಾನತುಗೊಳಿಸಿದೆ.
ಅಕ್ರಮದಲ್ಲಿ ಭಾಗಿಯಾದ ಆರೋಪಿಗಳನ್ನು ಯಾವುದೇ ಮುಲಾಜಿಲ್ಲದೆ ಶಿಕ್ಷೆಗೆ ಗುರಿ ಪಡಿಸಲಾಗುವುದು, ಯಾರನ್ನು ಕೂಡ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿಗಳಾದ ರಮೇಶ್ ತಿಳಿಸಿದ್ದಾರೆ.

0 Comments