ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಹಿಜಾಬ್ ಧರಿಸಲು ಅನುಮತಿ ನೀಡದ ಕಾರಣ ಪರೀಕ್ಷೆಗೆ ತೆರಳದೆ ವಿದ್ಯಾರ್ಥಿನಿಯರು ಹೊರಬಂದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ತಾಲೂಕಿನ ಇಂದಾವರ ಶಾಲೆಯಲ್ಲಿ ಇದೀಗ ಮತ್ತೆ ಹಿಜಾಬ್ ಕುರಿತಾದ ಗೊಂದಲ ಆರಂಭವಾಗಿದ್ದು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಸಮವಸ್ತ್ರದ ವೇಲ್ ಅನ್ನು ತಲೆಗೆ ಧರಿಸಿ ಶಾಲೆಗೆ ತೆರಳಿದ್ದರು ಆದರೆ ಹೈ ಕೋರ್ಟ್ ನ ಆದೇಶದ ಪ್ರಕಾರ ಶಾಲಾ ಶಿಕ್ಷಕರು ಅನುಮತಿ ನೀಡದೆ ಇದ್ದಾಗ ಪರೀಕ್ಷೆಯನ್ನು ಬರೆಯದೆ ಶಾಲೆಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ಬಜರಂಗದಳದ ವತಿಯಿಂದ ರಾಷ್ಟ್ರಪ್ರೇಮಿಗಳ ದಿನಾಚರಣೆ
ಶಾಲೆಯಲ್ಲಿ ಇಂದು ಹಿಂದಿ ಭಾಷಾ ಪರೀಕ್ಷೆಯಿತ್ತು ಹಿಜಾಬ್ ಧರಿಸಿದವರನ್ನು ಶಾಲೆಗೆ ಶಿಕ್ಷಕರು ಅನುವು ಮಾಡಿಲ್ಲ ಆದ ಕಾರಣ ಹೊರ ಬಂದಿದ್ದೇವೆ. ನಾವು ಬೇರೆಯ ಹಿಜಾಬ್ ಧರಿಸಿಲ್ಲ ಶಾಲಾ ಸಮವಸ್ತ್ರದ ವೇಲ್ ಅನ್ನು ತಲೆಗೆ ಹಾಕಿಕೊಂಡಿದ್ದೇವೆ ಈ ರೀತಿಯ ನಿಯಮಗಳನ್ನು ಅಳವಡಿಸುವುದು ಎಷ್ಟು ಸರಿ ಎಂದು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದೇವೆ ಆದರೆ ಏಕಾಏಕಿ ಈಗ ಹೊಸ ನಿಯಮಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಿರುವುದು ಸರಿಯಲ್ಲ ಎಂದಿದ್ದಾರೆ.
ಹಿಜಾಬ್ ಬೇಕು ವಿದ್ಯಾಭ್ಯಾಸವು ಬೇಕು :
ಹಿಜಾಬ್ ಗಾಗಿ ವಿದ್ಯಾರ್ಥಿನಿಯರು ಪರೀಕ್ಷೆಯಿಂದ ಹೊರಗುಳಿದಿರುವುದು ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ವಿದ್ಯಾರ್ಥಿನಿಯರಿಗೆ ಹಿಜಾಬ್ ಮುಖ್ಯವೇ ಅಥವಾ ವಿದ್ಯೆ ಮುಖ್ಯವೇ ಎಂದು ಪ್ರಶ್ನಿಸಿದಾಗ ನಮಗೆ ಎರಡೂ ಮುಖ್ಯ ಹಿಜಾಬ್ ಇಲ್ಲದೆ ನಾವು ಇರಲಾರೆವು ಎಂದು ಕೆಲ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಒಟ್ಟಾರೆ ಕೆಲ ದಿನಗಳಿಂದ ನಿರಂತರವಾಗಿ ವಿವಾದ, ಸಂಘರ್ಷಗಳನ್ನುಂಟುಮಾಡಿರುವ ಹಿಜಾಬ್ ಧರಿಸುವ ಕುರಿತಾದ ವಿಷಯವು ಎಂದಿಗೆ ಅಂತ್ಯ ಕಾಣುವುದೋ ಎಂಬಂತಾಗಿದೆ.

0 Comments