ಮೂಡಿಗೆರೆ : ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯವಂತರಾಗಿರಬೇಕು ಹಾಗೂ ದೀರ್ಘಾಯುಷ್ಯ ಹೊಂದಬೇಕೆಂದು ಪ್ರಾರ್ಥಿಸಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪೂಜೆ ಸಲ್ಲಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶ್ರೀ ದೇವರಮನೆ ಕಾಲಭೈರೈಶ್ವರ ಸನ್ನಿಧಾನದಲ್ಲಿ ನಡೆಸಿದ ಈ ಪೂಜೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ಉತ್ತಮ ವಾಗಿರಲಿ ಹಾಗೂ ಆಯುಷ್ಯ ವೃದ್ಧಿಸಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗಿದೆ ಎಂದು ಯುವಮೋರ್ಚಾ ಪದಾಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ : ಕಮಿಷನ್ ವಿಚಾರವಾಗಿ ಧರ್ಮಸ್ಥಳಕ್ಕೆ ತೆರಳಿ ಆಣೆ ಪ್ರಮಾಣ ಮಾಡಿದ ಮಾಜಿ ಹಾಗೂ ಹಾಲಿ ಶಾಸಕರು

ನಂತರ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ನರೇಂದ್ರ ಮೋದಿಯವರಂತಹ ಅತ್ಯುತ್ತಮ ಮನುಷ್ಯ ನಮ್ಮ ಪ್ರಧಾನಿಯಾಗಿರುವುದು ನಮ್ಮ ಹೆಮ್ಮೆಯ ವಿಚಾರ, ಇತ್ತೀಚೆಗೆ ಪಂಜಾಬ್ ಕಾಂಗ್ರೆಸ್ ಸರ್ಕಾರ ಅವರ ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿತ್ತು ಆದರೆ ನೂರಾರು ಕೋಟಿ ಭಾರತೀಯರ ಶ್ರೀರಕ್ಷೆ ಹಾಗೂ ಜನರ ಆಶೀರ್ವಾದ ಅವರನ್ನು ಎನೂ ಮಾಡಲು ಸಾಧ್ಯವಾಗಲಿಲ್ಲ ಎಂದರು. ಮೂಡಿಗೆರೆ ತಾಲೂಕು ಬಿಜೆಪಿ ಅಧ್ಯಕ್ಷ ರಘು ಜನ್ನಾಪುರ ಮಾತನಾಡಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೈನಿಕರಿದ್ದಂತೆ ಸಮಾಜದಲ್ಲಿ ಎನೇ ನಡೆದರೂ ಕೂಡಲೇ ಸ್ಪಂದಿಸುವ ಕಾರ್ಯ ಮಾಡಬೇಕು ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ನಾಯಕರು ಕೂಡಾ ಯುವ ಮೋರ್ಚಾದಲ್ಲಿ ಕೆಲಸ ಮಾಡಿ ದೊಡ್ಡ ಹುದ್ದೆ ಪಡೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ರ ಜಯಂತಿ ಆಚರಣೆ ಕೂಡ ನಡೆಯಿತು

ತಾಲೂಕು ಯುವಮೋರ್ಚಾ ಅಧ್ಯಕ್ಷ ಅವಿನಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ, ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕೋಟ್ಯಾನ್, ಗಗನ್ ಕಡೂರು, ಸಂಜಯ್ ಗೌಡ ಕೊಟ್ಟಿಗೆಹಾರ,ಅಜಿತ್ ದುರ್ಗದಹಳ್ಳಿ ,ಅರುಣ್ ಕುಂಬರಡಿ,ಚಿರಾಗ್ ಕೊಟ್ರಕೆರೆ , ಉತ್ತಮ್ ಬಣಕಲ್, ವಿಶ್ವ ಮುಗ್ರಹಳ್ಳಿ,ಮಿಥುನ್ ಬೆಳ್ಳಿ, ಅನಿಲ್ ಮೂಡಿಗೆರೆ, ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್, ಪ್ರಸಾದ್ ಕುಂದೂರು ಮುಂತಾದವರು ಉಪಸ್ಥಿತರಿದ್ದರು.

ತನು ಕೊಟ್ಟಿಗೆಹಾರ, ವರದಿಗಾರರು