ಮಡಿಕೇರಿ : (ನ್ಯೂಸ್ ಮಲ್ನಾಡ್ ವರದಿ) ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದವು ಗೊಂದಲಮಯ ವಾತಾವರಣವನ್ನು ಉಂಟುಮಾಡಿ ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ಒಂದೆಡೆ ಮಾಡಿದ್ದರೆ ವಿದ್ಯಾರ್ಥಿಗಳ ನಡುವಿನ ಭಿನ್ನಾಭಿಪ್ರಾಯ ಇನ್ನೊಂದೆಡೆ ತಾರಕಕ್ಕೇರಿದೆ.ಯುವಕನೋರ್ವ ಕೇಸರಿ ಶಾಲು ಧರಿಸಿದ ಕಾರಣಕ್ಕಾಗಿ ಆತನಿಗೆ ಸ್ನೇಹಿತರೇ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
ಮಡಿಕೇರಿಯ ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅಂತೋಣಿ ಪ್ರಜ್ವಲ್ ಎಂಬಾತ ಇಲ್ಲಿನ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದ.
ಇದನ್ನೂ ಓದಿ : ಜೈನ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮೂವರ ವಿರುದ್ದ ದೂರು ನೀಡಿದ ಕಳಸ ಜೈನ ಸಮುದಾಯ
ಮೊನ್ನೆ ನಡೆದ ಹಿಜಾಬ್ ಹಾಗೂ ಕೇಸರಿ ಶಾಲುಗಳ ನಡುವಿನ ಪ್ರತಿಭಟನೆಯಲ್ಲಿ ಈತ ಕೇಸರಿ ಶಾಲು ಧರಿಸಿದ ಕಾರಣಕ್ಕೆ ಹಾಸ್ಟೆಲ್ ನ ಏಳು ಜನ ಅನ್ಯಕೋಮಿನ ಯುವಕರು ಪ್ರಜ್ವಲ್ ನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದಾಗಿ ಮನನೊಂದ ಪ್ರಜ್ವಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಹಲ್ಲೆಯ ಕುರಿತು 07 ಜನರ ವಿರುದ್ದ ದೂರು ನೀಡಿದರೂ ಕೂಡ ಪೊಲೀಸರು ಓರ್ವನ ವಿಚಾರಣೆ ನಡೆಸಿದ್ದಾರೆ ಇದರಿಂದ ಯಾವುದೇ ನ್ಯಾಯ ದೊರೆತಿಲ್ಲ ಆದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ವಿಷ ಸೇವಿಸಿ ಗೆಳೆಯರಿಗೆ ಕರೆ ಮಾಡಿ ತಿಳಿಸಿದ್ದಾನೆ. ತಕ್ಷಣ ಧಾವಿಸಿದ ಸ್ನೇಹಿತರು ಅವರ ಸಮಯ ಪ್ರಜ್ಞೆಯಿಂದ ಅಂತೋಣಿ ಪ್ರಜ್ವಲ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಧ್ಯೆ ಹಾಸ್ಟೆಲ್‍ನಲ್ಲಿ ಪ್ರಜ್ವಲ್ ಗೆ ಅನ್ಯಕೋಮಿನವರಿಂದ ಭಯ ಹಾಗೂ ಹಾಸ್ಟೆಲ್ ನ ವಾರ್ಡನ್ ನಿಂದಲೂ ತಾರತಮ್ಯ ಹಾಗೂ ಬೆದರಿಕೆ ಇದೆ ಎಂಬ ಆರೋಪವೂ ಕೇಳಿ ಬಂದಿದೆ.
ಆರು ಜನ ಕೇಸರಿ ಕಾರ್ಯಕರ್ತರ ಮೇಲೆ ದೂರು ದಾಖಲು : ವಿದ್ಯಾರ್ಥಿ ಪ್ರಜ್ವಲ್ ಗೆ ಹಲ್ಲೆ ನಡೆಸಿದ ಮೊಹಮ್ಮದ್ ಎಂಬಾತನ ಮೇಲೆ ಕೆಲ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೊಹಮ್ಮದ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರು ಜನರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

0 Comments