ಹಾಸನ : (ನ್ಯೂಸ್ ಮಲ್ನಾಡ್ ವರದಿ) ವಾಹನಗಳಲ್ಲಿ ಗೋಸಾಗಾಟ ಮಾಡುವವರನ್ನು ಅಡ್ಡಗಟ್ಟಿ ನಾವು ಭಜರಂಗದಳದ ಕಾರ್ಯಕರ್ತರು ಎಂದು ಹೇಳುತ್ತಾ ಹಣ ವಸೂಲಿ ಮಾಡುತ್ತಿದ್ದಾರೆ ನೈತಿಕ ಪೊಲೀಸ್ ಗಿರಿ ನಡೆಸಲು ಅಧಿಕಾರ ನೀಡಿದವರಾರು ಎಂದು ಸಂಸದ ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಹರ್ಷ ಅವರ ತಾಯಿಯ ಬ್ಯಾಂಕ್ ಖಾತೆಗೆ ಬಿತ್ತು ಬರೋಬ್ಬರಿ ಅರ್ಧ ಕೋಟಿ ಮೃತ ಹರ್ಷನ ಕುಟುಂಬಕ್ಕೆ ನೆರವಿನ ಮಹಾಪೂರ

ಹಾಸನ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲದ ಗಂಡಸಿ ಹೋಬಳಿಯಲ್ಲಿ ನಡೆದ ಜಾತ್ರೆಯಲ್ಲಿ ಎತ್ತುಗಳನ್ನು ಖರೀದಿಸಿ ತೆರಳುತ್ತಿದ್ದ ರೈತರನ್ನು ಮಂಗಳೂರಿಗೆ ತೆರಳುತ್ತಿದ್ದ ಕೆಲವರು ಕಸಾಯಿ ಖಾನೆಗೆ ಸಾಗಾಟ ನಡೆಸುತ್ತಿದ್ದಾರೆ ಎಂದು ಭಾವಿಸಿ ಗಲಾಟೆ ಮಾಡಿದ್ದಾರೆ ವಾಹನವನ್ನು ತಡೆದಿದ್ದಾರೆ ಅವರಿಂದ ಹಣಕ್ಕಾಗಿ ಡಿಮ್ಯಾಂಡ್ ಮಾಡುವುದು ಎಷ್ಟು ಸರಿ, ಭಜರಂಗದಳದ ಹೆಸರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸುವುದು ಸರಿಯಲ್ಲ ಇದಕ್ಕೆ ಅವಕಾಶ ನೀಡಿದವರಾರು ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ರೈತರು ಜಾತ್ರೆಯಿಂದ ಎತ್ತುಗಳನ್ನು ಖರೀದಿ ಮಾಡಿದ್ದೇವೆ ಎಂದರೂ ಬಿಡಲಿಲ್ಲ ಈ ಸಂದರ್ಭದಲ್ಲಿ ಪ್ರತಿಭಟನೆಗಿಳಿದ ರೈತರು ಆಕ್ರೋಶದಿಂದ ಘೋಷಣೆಗಳನ್ನು ಹಾಕಿದರು. 

ನಂತರದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ ಸಂಸದ ಪ್ರಜ್ವಲ್ ರೇವಣ್ಣ ಸ್ಥಳೀಯರಿಂದ ಮಾಹಿತಿ ಪಡೆದು ಈ ಕುರಿತು ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟರು. ಭಜರಂಗದಳದ ವಿರುದ್ಧ ವಾಗ್ದಾಳಿ ನಡೆಸಿದರು ಭಜರಂಗದಳ ಎಂದು ಕಾರ್ಡ್ ತೋರಿಸುವುದು, ನೈತಿಕ ಪೊಲೀಸ್ ಗಿರಿ ನಡೆಸುವುದು, 30 - 40 ಸಾವಿರ ಹಣ ಕೇಳುವುದು ಇಲ್ಲದೆ ಹೋದಲ್ಲಿ ಪೊಲೀಸರಿಗೆ ಕರೆ ಮಾಡಿ ಕೇಸ್ ಮಾಡುವಂತೆ ಹೇಳುವುದು, ಸಿವಿಲ್ ಡ್ರೆಸ್ ನಲ್ಲಿ ಇವರೇ ಪೊಲೀಸರ ಕೆಲಸ ಮಾಡುವುದಾದರೆ ಪೊಲೀಸರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಶಿಕ್ಷೆ ನೀಡಲು ಕಾನೂನಿದೆ ಹಿಡಿಯಲು ಪೊಲೀಸರಿದ್ದಾರೆ ಈ ಮಧ್ಯೆ ನೈತಿಕ ಪೊಲೀಸ್ ಗಿರಿ ನಡೆಸುವುದು ಸರಿಯಲ್ಲ ನಿಜವಾಗಿಯೂ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ ಅವರ ಮೂಲಕ ತಡೆಯಲಿ ಅದಕ್ಕೆ ನಾವೂ ಬೆಂಬಲ ಕೊಡುತ್ತೇವೆ. ಆದರೆ ಸಂಘಟನೆಗಳ ಹೆಸರು ಹೇಳಿಕೊಂಡು ನಿಜವಾದ ರೈತರಿಗೆ ತೊಂದರೆ ಕೊಡುವುದನ್ನು ಒಪ್ಪಲಾಗುವುದಿಲ್ಲ ಎಂದರು.