ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಅಪರಿಚಿತ ವಾಹನವೊಂದು ಗುದ್ದಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ಚಿಕ್ಕಮಗಳೂರಿನ ಮೂಗ್ತಿಹಳ್ಳಿ ಸಮೀಪದ ಸರಾಯ್ ಹೋಟೆಲ್ ಬಳಿ ಅಪರಿಚಿತ ವಾಹನವೊಂದು ಗುದ್ದಿದ ಪರಿಣಾಮ ಚಿಕ್ಕಮಗಳೂರು ನಗರದ ಷರೀಫ್ ಗಲ್ಲಿಯ ವಿಘ್ನೇಶ್ವರ ಫೈನಾನ್ಸ್ ಮಾಲೀಕರಾದ ಚಿನ್ನಸ್ವಾಮಿ ಎಂಬ 53 ವರ್ಷ ಪ್ರಾಯದ ವ್ಯಕ್ತಿಯು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಕೊಪ್ಪ: ಸಹಕಾರ ಸಾರಿಗೆ ಬಸ್ ಬಿಡಿ ಭಾಗಗಳ ಕಳ್ಳತನ, ವೀಡಿಯೋ ವೈರಲ್
ಹಿಟ್ ಅಂಡ್ ರನ್ ನಡೆಸಿದ ವಾಹನವನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ಕಾರ್ಯ ಪ್ರವೃತರಾಗಿದ್ದು ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತವನ್ನು ನಡೆಸಿ ಎಸ್ಕೇಪ್ ಆಗಿರುವ ವಾಹನವನ್ನು ಆದಷ್ಟು ಶೀಘ್ರವಾಗಿ ಹುಡುಕಿ ಆತನಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಶಿಕ್ಷೆ ವಿಧಿಸಬೇಕು ಹಾಗೂ ಕುಟುಂಬದವರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮೃತ ವ್ಯಕ್ತಿಯು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದು ಕುಟುಂಬಸ್ಥರು ಮನೆಗೆ ಆಸರೆಯಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

0 Comments