ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಹುಲಿ ಉಗುರು, ಚರ್ಮ ಹಾಗೂ ಹುಲಿಯ ಇತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ವನ್ಯಜೀವಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ಮಾಲ್ದಾರೆ ಗ್ರಾಮದ ನಾಲ್ವರು ಆರೋಪಿಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ನಲ್ಲಿ ಸತ್ತು ಬಿದ್ದಿದ ಹುಲಿಯ ಭಾಗಗಳನ್ನು ಹೊರತೆಗೆದಿದ್ದಾರೆ ಎಂದು ಎಫ್.ಐ. ಆರ್ ನಲ್ಲಿ ದಾಖಲು ಮಾಡಲಾಗಿದೆ. ಆದರೆ ಹುಲಿಯನ್ನು ಯಾರೋ ಗುಂಡಿಕ್ಕಿಕೊಂದಿದ್ದಾರೆ. ಹುಲಿಯನ್ನು ಹತ್ಯೆ ಮಾಡಿದ ಪ್ರಮುಖ ಆರೋಪಿ ಇನ್ನೂ ಸೆರೆಯಾಗಿಲ್ಲ ಎಂಬ ವದಂತಿಗಳು ಮೂಡಿವೆ.
ಇದನ್ನೂ ಓದಿ : ಕಾಲೇಜಿಗೆ ಹಿಜಾಬ್ ಧರಿಸಿಯೇ ಬರುತ್ತೇವೆ : ಕಾಲೇಜು ವಿದ್ಯಾರ್ಥಿಗಳ ಆಕ್ರೋಶ
ಈ ಕುರಿತು ಕಾರ್ಯಾಚರಣೆ ನಡೆಸಿದ ಇಲಾಖೆಯ ಅಧಿಕಾರಿಗಳು ತಟ್ಟಳ್ಳಿ ಗಿರಿಜನ ಬಡಾವಣೆಯ ರಾಜೇಶ್ ಜೆ.ಜೆ(34), ಹರೀಶ್ ಜೆ.ಜೆ (32), ವಿನು ಜೆ.ಕೆ(28) ಮತ್ತು ರಮೇಶ್ ಜೆ.ಬಿ(28) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.
ಹುಲಿಯ ಚರ್ಮ,ಹುಲಿಯ ಕಾಲುಗಳು, ಏಳು ಹುಲಿ ಉಗುರುಗಳು, ಮತ್ತು ಹುಲಿಯ ಒಂಬತ್ತು ಮೀಸೆಗಳನ್ನು ಆರೋಪಿಗಳು ಹೊಂದಿದ್ದರು ಎನ್ನಲಾಗಿದೆ. ಆರೋಪಿಗಳು ಮಾಲ್ದಾರೆಯಲ್ಲಿ ಹುಲಿಯ ಭಾಗಗಳನ್ನು ಮಾರಾಟ ಮಾಡಲು ಯತ್ನಿಸಿದಾಗ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಇಲಾಖೆಯು ತನಿಖೆ ನಡೆಸುತ್ತಿದ್ದು ಹುಲಿಯನ್ನು ಯಾವರೀತಿ ಹತ್ಯೆ ಮಾಡಲಾಗಿದೆ ಎಂಬುದರ ಕುರಿತು ವರದಿ ಬರಬೇಕಿದೆ, ಸಂಪೂರ್ಣ ತನಿಖೆಯ ನಂತರ ಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದಾದರೆ ಆರೋಪಿಯ ಪತ್ತೆಗೆ ಜಾಡು ಹಿಡಿಯಲಾಗುವುದು ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

0 Comments