ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಶಿವಮೊಗ್ಗದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಸೀಗೆಹಟ್ಟಿ ಹರ್ಷ ಕುಟುಂಬ ಸದಸ್ಯರಿಗೆ ಮುಂದಿನ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿತ್ತು ಈ ಹಿನ್ನೆಲೆ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಸೂಚಿಸಿದಲ್ಲಿ ಸ್ಥಾನ ಬಿಟ್ಟು ಕೊಡುವುದಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ವಿವಿಧ ಕ್ರೀಡೆಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದ ಶೃಂಗೇರಿ ಜೆಸಿಬಿಎಂ ಕಾಲೇಜು ವಿದ್ಯಾರ್ಥಿಗಳು

ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಸೀಗೆಹಟ್ಟಿ ಹರ್ಷನ ಕುಟುಂಬಕ್ಕೆ ಮುಂದಿನ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಪ್ರತಿಕ್ರಿಯೆ ನೀಡಿರುವ ಗ್ರಾಮೀಣಾಭಿವೃದ್ದಿ ಸಚಿವ ಶಿವಮೊಗ್ಗದ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ಪಕ್ಷವು ಸ್ಥಾನವನ್ನು ಬಿಟ್ಟು ಕೊಡುವಂತೆ ಸೂಚನೆ ನೀಡಿದಲ್ಲಿ ಇನ್ನೋರ್ವ ಹಿಂದೂವಿಗೆ ನಾನು ಈ ಸ್ಥಾನವನ್ನು ಬಿಟ್ಟು ಕೊಡಲು ಸಿದ್ಧನಿದ್ದೇನೆ ಆದರೆ ಮುಸ್ಲಿಮರಿಗೆ ಈ ಸ್ಥಾನ ಕೊಡಲಾರೆ ಎಂದಿದ್ದಾರೆ. 

ಹರ್ಷನ ಕುಟುಂಬದವರಿಗೆ ಸ್ಥಾನವನ್ನು ಬಿಟ್ಟು ಕೊಡುವುದರಲ್ಲಿ ಎರಡನೇ ಮಾತಿಲ್ಲ ರಾಜಕೀಯದಲ್ಲಿ ನಾನು ಬೇರೊಬ್ಬರಿಗೆ ಅವಕಾಶ ನೀಡುವುದಾದರೆ ಇನ್ನೋರ್ವ ಹಿಂದೂವಿಗೆ ಆ ಸ್ಥಾನವನ್ನು ನೀಡುತ್ತೇನೆ ಹೊರತು ಮುಸ್ಲಿಮರಿಗಲ್ಲ ಎಂದರು. ಕಾಂಗ್ರೆಸ್ ನವರದ್ದು ಈ ರೀತಿಯ ಮನಸ್ಥಿತಿಯಲ್ಲ ಅವರಿಗೆ ಸ್ಥಾನವು ಬೇಕು, ಮುಸ್ಲಿಮರ ವೋಟುಬೇಕು ಕೊನೆಯದಾಗಿ ಬಿಜೆಪಿಯನ್ನು ಟೀಕಿಸಬೇಕು ಇದನ್ನು ಅವರು ಮಾಡುತ್ತಾರೆ ಎಂದರು. 

ಪ್ರಸ್ತುತ ಶಿವಮೊಗ್ಗದ ವಾತಾವರಣ ಸುಧಾರಣೆಗೆ ಬಂದಿದ್ದು ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೃತ ಹರ್ಷನ ಶವಯಾತ್ರೆಯ ಸಮಯದಲ್ಲಿ ಕೈಮೀರಿ ಹೋಗಿದ್ದ ವಾತಾವರಣವು ಪ್ರಸ್ತುತ ನಿಯಂತ್ರಣಕ್ಕೆ ಬಂದಿದೆ. ರಾಜ್ಯದ ದೇಶದ ಅನೇಕ ಕಡೆಗಳಲ್ಲಿ ಹರ್ಷನ ಸಾವಿಗೆ ನ್ಯಾಯ ದೊರೆಯಬೇಕೆಂದು ಆಗ್ರಹಿಸಿ ಇಂದಿಗೂ ಪ್ರತಿಭಟನೆಗಳು ಆಗ್ರಹಗಳು ನಡೆಯುತ್ತಲೇ ಇದೆ.