ಕೊಡಗು : (ನ್ಯೂಸ್ ಮಲ್ನಾಡ್ ವರದಿ) 30ಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ಹೈ ಕೋರ್ಟ್ ನ ಆದೇಶವನ್ನು ಕಡೆಗಣಿಸಿ ಧಾರ್ಮಿಕ ಗುರುತನ್ನು ತೋರಿಸುವ ವಸ್ತ್ರವನ್ನು ಧರಿಸಿಕೊಂಡು ಶಾಲೆಗೆ ಆಗಮಿಸಿದಾಗ ಅವರನ್ನು ತರಗತಿಯೊಳಗೆ ಪ್ರವೇಶಿಸಲು ಅನುಮತಿಸದ ಕಾರಣ ಪುನಃ ಮನೆಗೆ ವಾಪಸ್ ತೆರಳಿದೆ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಇಂದಿನಿಂದ ಪ್ರೌಢಶಾಲೆ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ ಆದರೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಂತೆ ಧಾರ್ಮಿಕ ಗುರುತು ಸೂಚಿಸುವ ಬಟ್ಟೆಗಳನ್ನು ಧರಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಬರಬಾರದು ಎಂಬುದನ್ನು ಧಿಕ್ಕರಿಸಿ ಶಾಲೆಗೆ ಆಗಮಿಸಿದ್ದಾರೆ. ಹಿಜಾಬ್ ಧರಿಸಿಕೊಂಡು ಬಂದಕಾರಣ ತರಗತಿಯೊಳಗೆ ಕೂರಲು ಶಿಕ್ಷಕರು ಅವಕಾಶ ನೀಡದೆ ಇದ್ದಾಗ ವಾಪಸ್ ಮನೆಗೆ ಹಿಂದಿರುಗಿದ್ದಾರೆ.

ಇದನ್ನೂ ಓದಿ : ಬದುಕಿದ್ದಾಗ ಸಾವಿರಾರು ಜನರ ಸೇವೆಗೈದ ನರ್ಸ್ ಗಾನವಿ ದಿಢೀರ್ ಸಾವು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 22 ರ ಯುವತಿ

ಕೊಡಗು ಜಿಲ್ಲೆಯ ನೆಲ್ಲಿಹುಡಿಕೇರಿ ಸರ್ಕಾರಿ ಶಾಲೆಯ 30 ವಿದ್ಯಾರ್ಥಿಗಳು ಇಂದು ಶಾಲೆಗೆ ಹಿಜಾಬ್ ಧರಿಸಿಕೊಂಡು ಆಗಮಿಸಿದ್ದಾರೆ. ತರಗತಿಗಳನ್ನು ಪ್ರವೇಶಿಸಲು ಹಿಜಾಬ್ ಗೆ ಅನುಮತಿ ಇಲ್ಲ ಎಂದಾಗ ವಾಗ್ವಾದ ಉಂಟಾಗಿ ನಂತರದಲ್ಲಿ ಶಿಕ್ಷಕರು ತರಗತಿಯೊಳಗೆ ಅನುಮತಿಸದೆ ಇದ್ದಾಗ ಶಾಲೆಯಿಂದ ಹೊರ ನಿಂತಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿಗಳ ಪೋಷಕರು ತಮಗೆ ನ್ಯಾಯಾಲಯದಿಂದ ಉತ್ತಮವಾದ ತೀರ್ಪು ದೊರೆಯುತ್ತದೆ ನ್ಯಾಯಸಮ್ಮತವಾಗಿರುತ್ತದೆ ತೀರ್ಪು ತಮ್ಮದಾಗಿರುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗಳಿಗೆ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪಾಲಿಸಲೇಬೇಕಿದೆ ಆದ ಕಾರಣ ಹಿಜಾಬ್ ಧರಿಸಿರುವ ವಿದ್ಯಾರ್ಥಿಗಳನ್ನು ಶಾಲೆಗೆ ಅನುಮತಿಸದೆ ನಿರಾಕರಿಸಿದ್ದಾರೆ. ಈ ಹಿನ್ನಲೆ ಯಾವುದೇ ರೀತಿಯ ಅಶಾಂತಿ ಹಾಗೂ ಯಾರಿಗೂ ಸಮಸ್ಯೆಗಳು ಉಂಟಾಗಬಾರದೆಂಬ ದೃಷ್ಟಿಯಿಂದ ಶಾಲೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.