ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಈ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಸಾಲಬಾಧೆ ತಡೆಯಲಾರದೆ ಆತ್ಮಹತ್ಯೆಗೆ ಶರಣಾದ ರೈತ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಈ ಹಿಂದಿನ ತಹಶೀಲ್ದಾರ್ ಅಂಬುಜಾ ಅವರು ಶೃಂಗೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ 94ಸಿ, 94ಸಿಸಿ ಅಡಿಯಲ್ಲಿ ಅನೇಕರಿಗೆ ಹಕ್ಕು ಪತ್ರ ವಿತರಿಸಿದ್ದರು, ಇದರಲ್ಲಿ ಕೆಲವು ಪ್ರದೇಶ ಅರಣ್ಯ ಇಲಾಖೆಗೂ ಒಳಪಡುತ್ತದೆ ಆದರೆ ಇಲಾಖೆಯ ಅಭಿಪ್ರಾಯವನ್ನು ತೆಗೆದುಕೊಳ್ಳದೆ ತಹಶೀಲ್ದಾರ್ ಅನೇಕರಿಗೆ ಹಕ್ಕು ಪತ್ರ ನೀಡಿರುವುದು ಪತ್ರಿಕೆ ಹಾಗೂ ಮಾಧ್ಯಮಗಳ ವರದಿಯಿಂದ ಅರಣ್ಯ ಇಲಾಖೆಗೆ ತಿಳಿದುಬಂದಿದ್ದು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಕೋರಿದೆ.
ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯದೇ ಹಕ್ಕುಪತ್ರ ನೀಡುವುದು ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆ ಮಾಡಿದಂತೆ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯದೆ ನೀಡಿದ ಹಕ್ಕುಪತ್ರಗಳಿಗೆ ಈ ಸ್ವತ್ತು ಮಾಡಬಾರದೆಂದು ಗ್ರಾಮಪಂಚಾಯಿತಿಗಳಿಗೆ ಆದೇಶಿಸಬೇಕೆಂದು ಅರಣ್ಯ ಇಲಾಖೆಯು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೋರಿದೆ. ಹಾಗೂ ಈಗಾಗಲೇ ಅರಣ್ಯಇಲಾಖೆ ಜಾಗದಲ್ಲಿ ಅನುಮತಿ ಪಡೆಯದೆ ನೀಡಿರುವ ಈ ಸ್ವತ್ತುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.

0 Comments