ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ಅನಧಿಕೃತವಾಗಿ ನಿರ್ಮಿಸಿರುವ ಶಿಲುಬೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನರಸಿಂಹರಾಜಪುರ ಘಟಕ ಈ ಹಿಂದೆಯೇ ಕರಗುಂದ ಚಲೋ ನಡೆಸಿತ್ತು ಹಾಗೂ ಅಂದು ಅಧಿಕಾರಿಗಳಿಗೆ ಗಡುವು ನೀಡಿತ್ತು ಆದರೆ ನೀಡಿದ ಸಮಯ ಮುಗಿದ ಕಾರಣ ನರಸಿಂಹರಾಜಪುರ ತಾಲೂಕು ಕಛೇರಿಯ ಮುಂಭಾಗದಲ್ಲಿ ಕ್ರಮ ಆಗ್ರಹ ಚಲೋ ಹಮ್ಮಿಕೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕರಗುಂದದಲ್ಲಿ ಅನಧಿಕೃತವಾಗಿ ಶಿಲುಬೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನರಸಿಂಹರಾಜಪುರ ಘಟಕ ಪ್ರತಿಭಟನೆ ನಡೆಸಿತ್ತು ಹಾಗೂ ಶೀಘ್ರವೇ ಅಲ್ಲಿಂದ ಶಿಲುಬೆ ತೆರವುಗೊಳಿಸಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ನಡೆಸಿತ್ತು. ಪ್ರಸ್ತುತ ಅಧಿಕಾರಿಗಳಿಗೆ ನೀಡಿದ ಸಮಯ ಮುಗಿದ ಕಾರಣ ಯಾವುದೇ ಬೆಳವಣಿಗೆಗಳು ಕಾಣದೇ ಇರುವುದರಿಂದ ಫೆಬ್ರವರಿ 11 ರಂದು ಬೆಳಗ್ಗೆ 11 ಗಂಟೆಗೆ ನರಸಿಂಹರಾಜಪುರ ತಾಲೂಕು ಕಛೇರಿ ಮುಂಭಾಗ ಕ್ರಮ ಆಗ್ರಹ ಚಲೋ ನಡೆಸಲಾಗುವುದು ಎಂದು ನರಸಿಂಹರಾಜಪುರ ಬಜರಂಗದಳ ತಿಳಿಸಿದೆ.

ಇದನ್ನೂ ಓದಿ : ಕೊಪ್ಪ : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೆರಿಗೆಯಾದ ಮಹಿಳೆ ; ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವಿಗಾಗಿ ಮನವಿ ಸಲ್ಲಿಸಿದ ಕುಟುಂಬ

ಅಧಿಕಾರಿಗಳು ಮಾತು ಕೊಟ್ಟು ಸುಮ್ಮನಾಗಿದ್ದಾರೆ ಆದರೆ ಆದರೆ ಯಾವುದೇ ಬೆಳವಣಿಗೆಗಳು ಇಲ್ಲಿಯವರೆಗೆ ಕಂಡು ಬಂದಿಲ್ಲ ಆದ ಕಾರಣ ಈ ಹಿಂದೆ ತಿಳಿಸಿದಂತೆ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದ್ದಾರೆ.