ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮೊನ್ನೆಯಷ್ಟೇ ದುಷ್ಕರ್ಮಿಗಳ ತಲವಾರಿನಿಂದ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಸೀಗೆಹಟ್ಟಿ ಹರ್ಷನ ಮನೆಗೆ ಇಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವರಾದ ಡಿ.ಎನ್ ಜೀವರಾಜ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. 

ಇದನ್ನೂ ಓದಿ : ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ; ಖಾಸಿಫ್, ಸಯ್ಯದ್ ನದೀಂ ಬಂಧನ

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ರೀತಿಯ ನಡೆಯಬಾರದ ಘಟನೆಗಳು ಶಿವಮೊಗ್ಗದಲ್ಲಿ ಕಡಿಮೆಯಾಗಿದ್ದವು, ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಕೆಲ ಘಟನೆಗಳನ್ನು ನೋಡಿದಾಗ ಒಂದಕ್ಕೊಂದು ಸಂಬಂಧವಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು. ಇದು ಕೇವಲ ಹರ್ಷನ ಹತ್ಯೆಯಲ್ಲ ಇದು ಇಡೀ ಹಿಂದೂ ಸಮಾಜದ ಹತ್ಯೆ. ಸಕ್ರಿಯವಾಗಿ ಧರ್ಮ ರಕ್ಷಣೆಯಲ್ಲಿ ಹಿಂದೂ ಪರ ಸಂಘಟನೆಗಳಲ್ಲಿ ತೊಡಗಿದ ವ್ಯಕ್ತಿಯನ್ನು ಹತ್ಯೆ ಮಾಡುತ್ತಾರೆ ಎಂದಾದರೆ ಈ ಘಟನೆಯನ್ನು ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸುವಂತದ್ದು ಈ ಸಾವಿಗೆ ನಮ್ಮ ಸರ್ಕಾರ ಆದಷ್ಟು ಬೇಗ ನ್ಯಾಯದೊರಕಿಸಲಿದೆ ಎಂದರು.

ಈ ಘಟನೆಯಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ನಮ್ಮ ಸರ್ಕಾರ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ಮೊದಲಿಗೆ ನಾನೊಬ್ಬ ಹಿಂದೂ ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿದಾರ, ನನ್ನ ಕೈಲಾದಷ್ಟು ಧನ ಸಹಾಯವನ್ನು ಆ ಕುಟುಂಬಕ್ಕೆ ಮಾಡಿದ್ದೇನೆ. ಸರ್ಕಾರವು ಈ ನಿಟ್ಟಿನಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಲಿದೆ ಕುಟುಂಬದ ಜೊತೆಗೆ ನಿಲ್ಲಲಿದೆ ಎಂದರು. ಇದ್ದಕ್ಕಿದ್ದಂತೆ ಅರಮನೆಯಲ್ಲಿ ನಮಾಜ್ ಮಾಡಲು ಆರಂಭಿಸಿದ್ದಾರೆ ಅರಮನೆಯಲ್ಲಿ ನಮಾಜ್ ಮಾಡಲು ಯಾವ ಕುರಾನ್ ಹೇಳಿದೆ ಎಂದು ಪ್ರಶ್ನಿಸಿದರು. ಈ ಕುರಿತಾಗಿ ಮಾತನಾಡಿದ ಅವರು ಮುಸಲ್ಮಾನರು ಅನುಕೂಲಕ್ಕೆ ತಕ್ಕಂತೆ ಕಾನೂನನ್ನು ಬಯಸುವುದನ್ನು ನಿಲ್ಲಿಸಬೇಕು ಒಂದೋ ಶರಿಯತ್ ಕಾನೂನನ್ನು ಆಯ್ಕೆ ಮಾಡಿಕೊಳ್ಳಲಿ ಇಲ್ಲವಾದರೆ ಐಪಿಸಿ ಗೆ ತಲೆಬಾಗಲಿ ಎಂದಿದ್ದಾರೆ.