ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಸಾಗರದ ಶಾಸಕ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ಮರಳುದಂಧೆಯಿಂದ ಕಮಿಷನ್ ತೆಗೆದುಕೊಳ್ಳುವ ಕುರಿತಾಗಿ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದ್ದು ಪ್ರಸ್ತುತ ಇಬ್ಬರೂ ಕೂಡ ಆಣೆ ಪ್ರಮಾಣಕ್ಕೆ ಮುಂದಾಗಿರುವ ವಿಚಾರ ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ಮೇಲೆ ಮಾಜಿ ಶಾಸಕ ಪ್ರಸ್ತುತ ಕಾಂಗ್ರೆಸ್ ಪಕ್ಷದ ವಕ್ತಾರರಾಗಿರುವ ಬೇಳೂರು ಗೋಪಾಲಕೃಷ್ಣ ಅವರು ಮರಳು ದಂಧೆಯಿಂದ ಶಾಸಕ ಹರತಾಳು ಹಾಲಪ್ಪ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು ಇದಕ್ಕೆ ಪ್ರತಿಯಾಗಿ ಸ್ಪಂದಿಸಿದ ಶಾಸಕ ಹರತಾಳು ಹಾಲಪ್ಪ ದಿನ ನಿಗದಿಪಡಿಸಿ ನನ್ನನ್ನು ಆಹ್ವಾನಿಸಲಿ ಆಣೆ ಪ್ರಮಾಣಕ್ಕೆ ನಾನು ಸಿದ್ಧನಿದ್ದೇನೆ ನಾನಾಗಲಿ ನನ್ನ ಸಂಬಂಧಿಕರಾಗಲೀ ಯಾರು ಕೂಡ ಮರಳು ಲಾರಿ ಮಾಲೀಕರಿಂದ ಅಥವಾ ಚಾಲಕರಿಂದ ಹಣ ಪಡೆದಿಲ್ಲಫೆಬ್ರವರಿ 13 ರೊಳಗೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧವಿರುವುದಾಗಿ ತಿಳಿಸಿದರು.

ಇದನ್ನೂ ಓದಿ :ಭಾರತ ಹಿಂದೂಗಳ ದೇಶವಲ್ಲ ಪ್ರಜಾಪ್ರಭುತ್ವ ಹೊಂದಿರುವ ದೇಶ; SDPI ಜಿಲ್ಲಾಧ್ಯಕ್ಷ ಮುಸ್ತಾಫ

ಕಮೀಶನ್ ನೀಡದೆ ಇದ್ದರೆ ಮರಳನ್ನು ತೆಗೆಯಲು ಬಿಡುವುದಿಲ್ಲ ಬೇಳೂರು ಗೋಪಾಲಕೃಷ್ಣ ಆರೋಪ :

ಶಾಸಕ ಹರತಾಳು ಹಾಲಪ್ಪ ಅವರು ಲಾರಿ ಮಾಲೀಕರಿಂದ ಮರಳಿಗಾಗಿ ಹಣ ಪಡೆಯುತ್ತಿದ್ದಾರೆ ಒಂದು ವೇಳೆ ಯಾವುದೇ ಲಾರಿ ಮಾಲೀಕರು ಹಣ ನೀಡದೆ ಹೋದ ಸಂದರ್ಭದಲ್ಲಿ ಅವರಿಗೆ ಮರಳನ್ನು ತೆಗೆಯಲು ಅನುಮತಿಸುವುದಿಲ್ಲ ಹಾಗೂ ಬೆದರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. 

ಒಟ್ಟಾರೆ ಶಾಸಕ ಹಾಗೂ ಮಾಜಿ ಶಾಸಕರ ನಡುವಿನ ಮಾತಿನ ಸಮರ ಜೋರಾಗಿದ್ದು ನಿಗದಿಪಡಿಸಿದ ದಿನಾಂಕದಂದು ಆಣೆ ಪ್ರಮಾಣ ವನ್ನು ಯಾರು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.