ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಹಕ್ಕು ಪತ್ರಗಳ ವಿತರಣೆಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆಸಿದ ತಹಶೀಲ್ದಾರ್ ಅಂಬುಜಾ ಅವರ ಅಮಾನತಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಛೇರಿಯಲ್ಲಿ ಹಕ್ಕು ಪತ್ರಗಳ ಕುರಿತಾಗಿ ನಡೆದ ಅವ್ಯವಹಾರದಲ್ಲಿ ತಪ್ಪೆಸಗಿದ ತಹಶೀಲ್ದಾರ್ ಅಂಬುಜಾ ಅವರನ್ನು ಅಮಾನತುಗೊಳಿಸುವ ಅಧಿಕಾರ ನನಗಿಲ್ಲ ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕ್ರಮಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.
ಇದನ್ನೂ ಓದಿ : ಕಡತ ಕಳ್ಳನದ ಆರೋಪಿ ಪ್ರಕಾಶನಿಗೆ ಶಾಸಕರ ಶ್ರೀರಕ್ಷೆ ಇದೆ: ಬಿಜೆಪಿ ಆರೋಪ
ಹಕ್ಕುಪತ್ರವನ್ನು ವ್ಯಾಪಾರದ ರೀತಿಯಲ್ಲಿ ವಿತರಿಸಿದ್ದರಿಂದ ಯಾವುದೇ ಹಕ್ಕುಪತ್ರವಿತರಣೆಗೆ ನಾನು ಧಾವಿಸಿಲ್ಲ. ಈ ಕುರಿತಾಗಿ ಅಧಿಕಾರಿಗಳಿಗೆ ಎಚ್ಚರಿಕೆ ಕೂಡ ನೀಡಲಾಗಿತ್ತು. ನೀಡಿರುವ ಹಕ್ಕು ಪತ್ರಗಳ ಕುರಿತಾಗಿ ಸಮಗ್ರ ತನಿಖೆಯಾಗಬೇಕು ಎಲ್ಲಾ ನಿಯಮಾವಳಿಗಳನ್ನು ಪಾಲಿಸಿ ಹಕ್ಕು ಪತ್ರ ಪಡೆದ ಫಲಾನುಭವಿಗಳಿಗೆ ಹಕ್ಕು ಪತ್ರ ಲಭಿಸಬೇಕು, ಒಂದೇ ವ್ಯಕ್ತಿ ಎರಡು ಮೂರು ಹಕ್ಕು ಪತ್ರ ಪಡೆದಿದ್ದಾರೆ ಎಂಬ ಮಾಹಿತಿ ಇದೆ ಆ ಕುರಿತು ಸ್ಪಷ್ಟ ತನಿಖೆಯಾಗಬೇಕು ಅರ್ಹರಿಗೆ ಹಕ್ಕು ಪತ್ರ ದೊರೆಯಬೇಕು ಎಂದರು.
ಈ ಹಿಂದೆ ಕೊಪ್ಪದಲ್ಲಿ ಕಡತ ನಾಶ ಮಾಡಿದ್ದ ತಾಲೂಕು ಕಛೇರಿಯ ಸಿಬ್ಬಂದಿ ಪ್ರಕಾಶ್ ನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕೆಡಿಪಿ ಸಭೆಯಲ್ಲಿ ತಿಳಿಸಲಾಗಿತ್ತು ಆದರೆ ಆತನ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಶೃಂಗೇರಿ ತಾಲೂಕು ಕಛೇರಿಗೆ ವರ್ಗಾವಣೆ ಮಾಡಿ ಇಲ್ಲೂ ಅನೇಕ ಲೋಪಗಳು ಉಂಟಾಗುವಂತೆ ಮಾಡಿರುವುದು ಅತ್ಯಂತ ಖಂಡನೀಯ ಎಂದರು.


0 Comments