ಹರಿಹರಪುರ : (ನ್ಯೂಸ್ ಮಲ್ನಾಡ್ ವರದಿ) ಹರಿಹರಪುರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಿನ್ನೆ ಹರಿಹರಪುರ ವಾಲಿಬಾಲ್ ಪ್ರೀಮಿಯರ್ ಲೀಗ್ ಅತ್ಯಂತ ಯಶಸ್ವಿಯಾಗಿ ನಡೆಯಿತು. ವಿಜೇತ ತಂಡಗಳು ಆಕರ್ಷಕ ಟ್ರೋಫಿ ಹಾಗೂ ಬಹುಮಾನವನ್ನು ಪಡೆಯುವ ಮೂಲಕ ಸಂಭ್ರಮಿಸಿದವು.
ಇದನ್ನೂ ಓದಿ : ಅಕ್ರಮ ಕಳ್ಳಭಟ್ಟಿ ತಯಾರಿಕಾ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಫ್ರೆಂಡ್ಸ್ ಇವರ ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ನಿನ್ನೆ ದಿನಾಂಕ 13.02.2022 ರಂದು ನಡೆಯಿತು.
ಈ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿಜಾಮ್ ಫ್ರೆಂಡ್ ಭಂಡಿಗಡಿ ಗೆದ್ದು ಮೊದಲ ಸ್ಥಾನವನ್ನು ಅಲಂಕರಿಸಿತು. ವಿಜೇತರಿಗೆ ಎಂಟು ಸಾವಿರ ರೂಪಾಯಿಗಳ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಿ ಆಯೋಜಕರು ಅಭಿನಂದಿಸಿದರು.
ಒಟ್ಟು ಆಹ್ವಾನಿತ ಎಂಟು ತಂಡಗಳಲ್ಲಿ ಈ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ ಆಯೋಜಕರು ಹಾಗೂ ಸ್ಥಳೀಯರು ವಿಜೇತ ತಂಡಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

0 Comments