ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಜಾತ್ರೆ ಇನ್ನಿತರ ಜನಸೇರುವ ಸಂದರ್ಭಗಳಲ್ಲಿ ಸರ ಕಳ್ಳತನ ನಡೆಸುತ್ತಿದ್ದ ಇಬ್ಬರು ಹೆಂಗಸರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : ಭಾರತಕ್ಕೆ ಮರಳಲಾರದೆ ಉಕ್ರೇನ್ ನಲ್ಲಿ ಸಿಲುಕಿರುವ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿಗಳು

ತುಮಕೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಈ ಸರಗಳ್ಳಿಯರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದು ಅನೇಕ ಕಡೆಗಳಲ್ಲಿ ಈ ಕಳ್ಳಿಯರು ಕೈಚಳಕವನ್ನು ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈಗಾಗಲೇ ಕಾರ್ಯಾಚರಣೆಯ ಮೂಲಕ ಇಬ್ಬರನ್ನು ಪೊಲೀಸರು ಬಂಧಿಸಿದ್ದು ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರನ್ನು ಜ್ಯೋತಿ ಹಾಗೂ ವಸಂತ ಎಂದು ಗುರುತಿಸಲಾಗಿದೆ. 

ಜಾತ್ರೆಗಳು ಹಾಗೂ ಇನ್ನಿತರ ಸಂದರ್ಭದಲ್ಲಿ ಜನಸಂದಣಿ ಇರುವ ಪ್ರದೇಶಗಳನ್ನು ಗುರುತಿಸಿ ಹೆಣ್ಣು ಮಕ್ಕಳು ಧರಿಸಿದ್ದ ಸರ, ಒಡವೆ ಕದ್ದು ಈ ಇಬ್ಬರು ಪರಾರಿಯಾಗುತ್ತಿದ್ದರು. ಇವರನ್ನು ಸೆರೆ ಹಿಡಿಯುವ ಸಲುವಾಗಿ ಕಳೆದ ಅನೇಕ ವರ್ಷಗಳಿಂದ ಪೊಲೀಸರು ಬಲೆಬೀಸಿದ್ದು ಇದೀಗ ಇಬ್ಬರು ಬಲೆಗೆ ಬಿದ್ದಿದ್ದಾರೆ. 

ಇವರ ಮೇಲೆ ಇನ್ನೂ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತು ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಕುದೇರು ಪಿಎಸೈ ಹನುಮಂತ ಉಪ್ಪಾರ್ ಯಶಸ್ವಿಯಾಗಿದ್ದಾರೆ.