ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ)ಶೃಂಗೇರಿ ತಾಲೂಕು ಕಛೇರಿಯಲ್ಲಿ  ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶರತ್ ರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಶರತ್ ಮೇಲೆ ಕ್ರಿಮಿನಲ್ ಕೇಸ್ ದಾಖಲುಮಾಡಿ ಬಂಧಿಸಿ ಜೈಲುಪಾಲಾಗಿರುವುದರಿಂದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಅವರು ಶರತ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಶೃಂಗೇರಿ: ಬೋಗಸ್ ಹಕ್ಕುಪತ್ರದ ಆಧಾರದ ಮೇಲೆ ಇ ಸ್ವತ್ತು ದಾಖಲಿಸಿ ನಂತರ ರದ್ದು : ತನಿಖೆ ನಡೆಸಿ ಕ್ರಮಕ್ಕೆ ಒತ್ತಾಯಿಸಿ ದೂರು.

ಎಸಿಬಿ ಅಧಿಕಾರಿಗಳ ದಾಳಿಯ ನಂತರದಲ್ಲಿ ಶೃಂಗೇರಿ ತಾಲೂಕು ಕಛೇರಿಯ ಕಡತ ನಾಪತ್ತೆ, ತಹಸೀಲ್ದಾರ್ ವಾಹನದ ಚಾಲಕ ವಿಜೇತ್ ನ ಆತ್ಮಹತ್ಯೆ ನಂತರದಲ್ಲಿ ನಡೆದ ಪ್ರತಿಭಟನೆ ಸೇರಿದಂತೆ ಅನೇಕ ಘಟನೆಗಳಿಗೆ ಶೃಂಗೇರಿ ಸಾಕ್ಷಿಯಾಗಿತ್ತು. ಮೃತ ಚಾಲಕ ವಿಜೇತ್ ನ ಡೆತ್ ನೋಟ್ ಅನುಸಾರ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಹಾಗೂ ಪ್ರಥಮ ದರ್ಜೆ ಸಹಾಯಕ ಶರತ್ ನನ್ನು ಅಮಾನತುಗೊಳಿಸಲಾಗಿದೆ ಎಂಬ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ. 

ಈ ಮಧ್ಯೆ ತಹಸೀಲ್ದಾರ್ ಅಂಬುಜಾ ಹಾಗೂ ಹಣ ನೀಡಿದವರ ಮಧ್ಯೆ ನಡೆದಿರುವ ಕಾಲ್ ರೆಕಾರ್ಡಿಂಗ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.