ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಭಾರತೀಯರ ಪಾಲಿಗೆ ಕರಾಳ ದಿನವಾದ ಫೆಬ್ರವರಿ 14 ರಂದು ಉಗ್ರರ ದಾಳಿಗೆ ಮಡಿದು ಸ್ವರ್ಗ ಸೇರಿರುವ ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಶೃಂಗೇರಿಯ ಬಜರಂಗದಳದ ವತಿಯಿಂದ ರಾಷ್ಟ್ರ ಪ್ರೇಮಿಗಳ ದಿನಾಚರಣೆ ನಡೆಯಿತು.

ಈ ಕುರಿತು ಮಾತನಾಡಿದ ಬಜರಂಗದಳದ ಹಿರಿಯ ಕಾರ್ಯಕರ್ತ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಜಮ್ಮು ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿ ಆರ್ ಪಿ ಎಫ್ ನ ಯೋಧರು ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೋರ್ ಬಳಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ಭಾರತದ 40 ವೀರ ಯೋಧರು ಹುತಾತ್ಮರಾಗಿ ಮೂರು ವರ್ಷ ಸಮೀಪಿಸಿದೆ. ಈ ಸಂದರ್ಭದಲ್ಲಿ ತಾಯ್ನಡಿಗಾಗಿ ಮಡಿದ ವೀರ ಯೋಧರನ್ನು ಸ್ಮರಿಸುವ ಸಲುವಾಗಿ ಹಾಗೂ ಮುಂಬರುವ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆಯಬಾರದು ಎಂದರು ಹಾಗೂ  ಯುವಕರಲ್ಲಿ ಅದ್ವಿತೀಯವಾದ ದೇಶ ಪ್ರೇಮವನ್ನು ತುಂಬಬೇಕೆಂದು ಕರೆ ನೀಡಿದರು.

ಇದನ್ನೂ ಓದಿ : ಸಾಮಾಜಿಕ ಕಾರ್ಯದ ಮೂಲಕ ಟ್ರಸ್ಟೀ ಅವರ ತಂದೆ ತಾಯಿಯ 40ನೇ ವಿವಾಹ ವಾರ್ಷಿಕೋತ್ಸವದ ವಿಭಿನ್ನ ಆಚರಣೆ.

ಭಾರತಮಾತೆಗೆ ಪುಷ್ಪಾರ್ಚನೆ ನಡೆಸುವ ಮೂಲಕ ಹಾಗೂ ಭಾರತಮಾತೆಗೆ ಹಾಗೂ ಮಡಿದ ವೀರ ಯೋಧರ ಪರವಾದ ಘೋಷಣೆಗಳನ್ನು ಕೂಗುತ್ತಾ ಕಾರ್ಯಕ್ರಮವು ಸಾಗಿತು.

ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ವೇಣುಗೋಪಾಲ್, ನಾಗರಾಜ್,ಅರುಣ್ ಆರ್, ರತ್ನಾಕರ ಬಜರಂಗದಳದ ತಾಲೂಕು ಸಂಯೋಜಕರಾದ ರವಿ ಸಂಜಯ್ ಪೂಜಾರಿ, ನಗರ ಸಂಚಾಲಕರಾದ ಸಂತೋಷ್ ಕೆರೆಮನೆ,ಸುನೀಲ್ ಸಂಪೆಕೊಳಲು ಹಾಗೂ ಬಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು.