ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮನ ನಡುವೆ ಕಲಹ ನಡೆದಿದ್ದು ಟ್ರ್ಯಾಕ್ಟರ್ ಹತ್ತಿಸಿ ತಮ್ಮನ ಕೊಲೆ ಮಾಡಲು ಅಣ್ಣನೇ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಳೆ ಹಸನವಾಡಿ ಗ್ರಾಮದ ಗೌತಮ್ ಎಂಬ ಯುವಕನ ಮೇಲೆ ವಿನಯ್ ಕುಮಾರ್ ಎಂಬ ಆತನ ಸಂಬಂಧಿ ಸಹೋದರ ವಿನಯ್ ಕುಮಾರ್ ಎಂಬಾತ ಟ್ರ್ಯಾಕ್ಟರ್ ಹತ್ತಿಸಿ ಗೌತಮ್ ನ ಕೊಲೆ ಮಾಡಲು ಯತ್ನಿಸಿದ್ದಾನೆ ಹಾಗೂ ನಂತರದಲ್ಲಿ ಟ್ರ್ಯಾಕ್ಟರ್ ಗೆ ಅಳವಡಿಸಿದ್ದ ಕಲ್ಟಿವೇಟರ್ ನಿಂದ ಅನೇಕ ಬಾರಿ ತಿವದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಹಿಜಾಬ್ ಕೇಸರಿ ಆಯ್ತು ಈಗ ‘ನೀಲಿ’ ಶಾಲು ಪ್ರತ್ಯಕ್ಷ ಸರ್ಕಾರದ ಆದೇಶಕ್ಕೆ ಗೋಲಿ ಹೊಡೆದ ಕಾಲೇಜು ಆಡಳಿತ ಮಂಡಳಿ
ಈ ಘಟನೆಯಿಂದಾಗಿ ಗೌತಮ್ ನ ಎದೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ನಂತರದಲ್ಲಿ ಆತನ ತಲೆಗೆ ರಿಂಗ್ ಸ್ಪ್ಯಾನರ್ ನಿಂದಲೂ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಹೋದರರ ಪುತ್ರರ ನಡುವಿನ ಜಾಗದ ಸಮಸ್ಯೆಯೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0 Comments